‘ಡೆವಿಲ್ ಎದುರು ನನ್ನ ಸಿನಿಮಾ ರಿಲೀಸ್’: ಪ್ರಥಮ್ ಬಹಿರಂಗ ಸವಾಲು
‘ಡೆವಿಲ್’ ಸಿನಿಮಾ ಬಿಡುಗಡೆ ಆಗುವ ತನಕ ಬೇರೆ ನಟರ ಸಿನಿಮಾಗಳನ್ನು ನೋಡಬೇಡಿ ಎಂದು ದರ್ಶನ್ ಫ್ಯಾನ್ಸ್ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಕುರಿತು ನಟ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಕನ್ನಡಕ್ಕೆ ಮಾಡುವ ದ್ರೋಹ ಆಗುತ್ತದೆ’ ಎಂದು ಅವರು ಹೇಳಿದ್ದಾರೆ. ಅಲ್ಲದೇ, ತಾವು ನಟಿಸಿದ ‘ಕರ್ನಾಟಕದ ಅಳಿಯ’ ಚಿತ್ರವನ್ನು ‘ಡೆವಿಲ್’ ಎದುರು ಬಿಡುಗಡೆ ಮಾಡುವುದಾಗಿ ಪ್ರಥಮ್ ತಿಳಿಸಿದ್ದಾರೆ.
ನಟ ಪ್ರಥಮ್ ಅವರು ನೇರ ನಡೆ-ನುಡಿಯ ವ್ಯಕ್ತಿ. ದರ್ಶನ್ ಅರೆಸ್ಟ್ ಆಗಿರುವ ಪೊಲೀಸ್ ಠಾಣೆಯ ಎದುರು ಗುಂಪು ಸೇರಿ ಜೈಕಾರ ಹಾಕಿದ ಅಭಿಮಾನಿಗಳ ವಿರುದ್ಧ ಪ್ರಥಮ್ (Pratham) ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗಾಗಿ ದರ್ಶನ್ ಅಭಿಮಾನಿಗಳು (Darshan Fans) ಪ್ರಥಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೆಲವರು ಕೊಲೆ ಬೆದರಿಕೆ ಕೂಡ ಹಾಕಿದ್ದು ಅಂಥವರ ವಿರುದ್ಧ ಪ್ರಥಮ್ ದೂರು ನೀಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ದರ್ಶನ್ ನಟನೆಯ ‘ಡೆವಿಲ್’ (Devil The Hero) ಬರುವ ತನಕ ಬೇರೆ ಯಾವ ಸಿನಿಮಾವನ್ನೂ ನೋಡಬಾರದು ಎಂದು ದರ್ಶನ್ ಫ್ಯಾನ್ಸ್ ಪೋಸ್ಟರ್ ಹಾಕುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ. ‘ಹೀಗೆಲ್ಲ ಮಾಡುವವರು ಕನ್ನಡ ದ್ರೋಹಿಗಳು. ಉದ್ದೇಶಪೂರ್ವಕವಾಗಿ ಬೇರೆ ನಟರ ಸಿನಿಮಾ ನೋಡಬೇಡಿ ಎಂದರೆ ತುಳಿದಂತೆ ಆಗುತ್ತದೆ. ಹಾಗಾದರೆ ನಾವು ‘ಡೆವಿಲ್’ ಸಿನಿಮಾದ ವಿರುದ್ಧವೇ ‘ಕರ್ನಾಟಕದ ಅಳಿಯ’ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ. ಅವರ ಸಿನಿಮಾ ಲೇಟ್ ಆದರೆ ನಾವು ಲೇಟ್ ಮಾಡಲ್ಲ. ಒಂದು ವೇಳೆ ಕ್ರಿಸ್ಮಸ್ಗೆ ಡೆವಿಲ್ ತೆರೆಕಂಡರೆ ಆ ಸಿನಿಮಾದ ಎದುರು ನನ್ನ ಸಿನಿಮಾ ರಿಲೀಸ್ ಮಾಡುತ್ತೇವೆ’ ಎಂದು ಪ್ರಥಮ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.