ಚಿಕ್ಕಂದಿನಲ್ಲೇ ಮಕ್ಕಳು ಸಂವಿಧಾನ ಅರ್ಥಮಾಡಿಕೊಳ್ಳಲು ಅದರ ಪೀಠಿಕೆ ಶಾಲೆಗಳಲ್ಲಿ ಓದಿಸಲಾಗುತ್ತಿದೆ: ಸಿದ್ದರಾಮಯ್ಯ

ಚಿಕ್ಕಂದಿನಲ್ಲೇ ಮಕ್ಕಳು ಸಂವಿಧಾನ ಅರ್ಥಮಾಡಿಕೊಳ್ಳಲು ಅದರ ಪೀಠಿಕೆ ಶಾಲೆಗಳಲ್ಲಿ ಓದಿಸಲಾಗುತ್ತಿದೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 26, 2024 | 1:30 PM

ಉಡುಪಿ ಪೇಜಾವರ ಮಠದ ಶ್ರೀಗಳು ಇತ್ತಿಚಿಗೆ ಭಾರತದ ಸಂವಿಧಾನವನ್ನು ಬದಲಿಸಿಬೇಕೆಂದು ಹೇಳಿರುವುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಅವರ ಹೇಳಿಕೆ ಆಶ್ಚರ್ಯ ಮೂಡಿಸುತ್ತದೆ, ಯಾಕೆಂದರೆ ಎಲ್ಲರೂ ಸಂವಿಧಾನ ಉಳಿಸುವುದಕ್ಕಾಗಿ ಹೋರಾಡುತ್ತಿದ್ದಾರೆ, ಕಳೆದ 75 ವರ್ಷಗಳಲ್ಲಿ 106 ತಿದ್ದುಪಡಿಗಳನ್ನು ಕಂಡಿರುವ ಭಾರತದ ಸಂವಿಧಾನ ವಿಶ್ವದಲ್ಲೇ ಅತ್ಯಂತ ದೀರ್ಘಕಾಲದಿಂದ ಪಾಲಿಸಿಕೊಂಡು ಬಂದಿರುವ ಸಂವಿಧಾನವಾಗಿದೆ ಎಂದರು.

ಬೆಂಗಳೂರು: ಸಂವಿಧಾನ ದಿನವಾಗಿರುವ ಇಂದು ಡಾ ಬಿಅರ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಮಾಲೆ ಹಾಕಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರಗಳು ಮತ್ತು ಸ್ಥಳೀಯ ಸಂಘಸಂಸ್ಥೆಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು, ಮಕ್ಕಳು ತಮ್ಮ ಸಂವಿಧಾನದತ್ತ ಹಕ್ಕು ಮತ್ತು ಕರ್ತವ್ಯಗಳನ್ನು ಚಿಕ್ಕಂದಿನಲ್ಲೇ ಅರ್ಥಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಶಾಲಾ ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುವ ಪದ್ಧತಿಯನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ ಸಂವಿಧಾನ ದಿನ ಆಚರಣೆ