ಸಾಗರ್ ಖಂಡ್ರೆಗೆ ಊರೊಳಗೆ ಕಾಲಿಡಲು ಬಿಡಲ್ಲ ಎಂದು ಹೇಳುವಂತೆ ಗ್ರಾಮಸ್ಥರಿಗೆ ತಿಳಿಸಿದ ಯತ್ನಾಳ್
ಈಶ್ವರ್ ಖಂಡ್ರೆಯವರ ಮಗ ಸಾಗರ್ ಖಂಡ್ರೆ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ, ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಅದರ ಪರವಾಗಿ ಸಾಗರ್ ಖಂಡ್ರೆ ಕೈಯೆತ್ತದ ಹೊರತು ಚಟ್ನಳ್ಳಿ ಗ್ರಾಮಕ್ಕೆ ಕಾಲಿಡಲು ಅವಕಾಶ ನೀಡಲ್ಲ ಅಂತ ಹೇಳಬೇಕೆಂದು ಗ್ರಾಮಸ್ಥರಿಗೆ ಯತ್ನಾಳ್ ತಿಳಿಸಿದರು.
ಬೀದರ್: ವಕ್ಫ್ ಬೋರ್ಡ್ ವಿರುದ್ಧ ಜನಜಾಗೃತಿ ಅಭಿಯಾನ ಶುರುಮಾಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ತಂಡ ಬೀದರ್ ತಾಲ್ಲೂಕಿ ಚಟ್ನಳ್ಳಿ ಗ್ರಾಮದ್ಲಲಿ ರೈತರೊಂದಿಗೆ ಸಂವಾದ ನಡೆಸಿತು. ನಂತರ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಯತ್ನಾಳ್ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಸ್ಥಾಪಿಸಿರುವ ತಮ್ಮ ಸಕ್ಕರೆ ಕಾರ್ಖಾನೆ ಬಗ್ಗೆ ಮಾತಾಡಿದರು. ಕಬ್ಬು ಬೆಳೆಗಾರರಿಗೆ ಮೊದಲು ಪ್ರತಿಟನ್ ಕಬ್ಬಿಗೆ ₹ 1,800 ನೀಡಲಾಗುತ್ತಿತ್ತು ಅದರೆ ತಾನು ₹ 2,650 ಕೊಡಲಾರಂಭಿಸಿದ ನಂತರ ಈಶ್ವರ್ ಖಂಡ್ರೆಯಂಥವರ ಕಣ್ಣು ಕೆಂಪಾದವು ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಮುಂದಿನ ಜನ್ಮದವರೆಗೆ ಕಾಯೋದ್ಯಾಕೆ ಈಗಲೇ ಮುಸ್ಲಿಂ ಆಗಲಿ: ಬಸನಗೌಡ ಪಾಟೀಲ್ ಯತ್ನಾಳ್
Latest Videos