AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಮುಂದಿನ ಜನ್ಮದವರೆಗೆ ಕಾಯೋದ್ಯಾಕೆ ಈಗಲೇ ಮುಸ್ಲಿಂ ಆಗಲಿ: ಬಸನಗೌಡ ಪಾಟೀಲ್ ಯತ್ನಾಳ್

ಸಿದ್ದರಾಮಯ್ಯ ಮುಂದಿನ ಜನ್ಮದವರೆಗೆ ಕಾಯೋದ್ಯಾಕೆ ಈಗಲೇ ಮುಸ್ಲಿಂ ಆಗಲಿ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 07, 2024 | 4:25 PM

Share

ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ, ರಾವಣ ಬ್ರಾಹ್ಮಣನಾಗಿದ್ದರೆ ರಾಮ ಕ್ಷತ್ರಿಯ, ಅದರೆ ಹಿಂದೂಗಳು ರಾಮನನ್ನು ಪೂಜಿಸುತ್ತಾರೆ, ಗೊಲ್ಲನಾಗಿರುವ ಕೃಷ್ಣನನ್ನು ಆರಾಧಿಸುತ್ತಾರೆ, ನಮ್ಮ ಪವಿತ್ರ ಗ್ರಂಥ ರಾಮಾಯಾಣ ಮತ್ತು ಮಹಾಭಾರತ ಬರೆದವರು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದರು ಎಂದು ಯತ್ನಾಳ್ ಹೇಳಿದರು.

ವಿಜಯಪುರ: ವಕ್ಫ್ ಬೋರ್ಡ್ ವಿರುದ್ಧ ಸಮರ ಸಾರಿ ವಿಜಯಪುರದಲ್ಲಿ ರೈತರ ಪರವಾಗಿ ಸತ್ಯಾಗ್ತಹ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್, ಇಂದು ತಮ್ಮ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಲೇವಡಿ ಮಾಡುತ್ತ ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯಗೆ ಮುಸಲ್ಮಾನರೆಂದರೆ ಅತೀವ ಅಭಿಮಾನ, ಹಿಂದೂಗಳು ಮತ್ತು ಹಿಂದೂ ದೇವರ ಬಗ್ಗೆ ಅಸಡ್ಡೆ, ದೇವಸ್ಥಾನಗಳಿಗೆ ಅವರು ಹೋಗಲ್ಲ, ಹಣೆಗೆ ಕುಂಕುಮ ಇಡಲ್ಲ, ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಅವರಿಗೆ ತಾಯಿ ಚಾಮುಂಡಿಯ ನೆನಪಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಿಜೆಪಿ ರಾಜ್ಯಾಧ್ಯಕ್ಷನನ್ನು ಬದಲಾಯಿಸುವ ಚರ್ಚೆ ಮುಂದೆ ಶುರುವಾಗಲಿದೆ: ಬಸನಗೌಡ ಪಾಟೀಲ್ ಯತ್ನಾಳ್