ಮುಡಾದಿಂದ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಸೈಟುಗಳನ್ನು ವಾಪಸ್ಸು ಪಡೆಯಲು ಹೇಳಿದ್ದೇವೆ: ಜಿಟಿ ದೇವೇಗೌಡ

ಮುಡಾದಿಂದ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಸೈಟುಗಳನ್ನು ವಾಪಸ್ಸು ಪಡೆಯಲು ಹೇಳಿದ್ದೇವೆ: ಜಿಟಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 07, 2024 | 5:12 PM

ಹೆಚ್​ಡಿ ಕುಮಾರಸ್ವಾಮಿ ಜೊತೆ ಮುನಿಸಿನ ಕಾರಣ ಜಿಟಿ ದೇವೇಗೌಡರು ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ನಿಖಿಲ್ ಪರ ಪ್ರಚಾರ ಮಾಡಲು ಹೋಗುತ್ತಿಲ್ಲ, ಪ್ರಚಾರದ ಬಗ್ಗೆ ಪ್ರಶ್ನೆ ಕೇಳುತ್ತಲೇ ಅವರು ನಗುತ್ತಾ ಅಲ್ಲಿಂದ ಓಡುವ ವೇಗದಲ್ಲಿ ಜಾಗ ಖಾಲಿ ಮಾಡಿದರು. ಕುಮಾರಸ್ವಾಮಿಯವರು ಭಿನ್ನಾಭಿಪ್ರಾಯವಿರುವುದನ್ನು ಅಂಗೀಕರಿಸಿದ್ದಾರೆ.

ಮೈಸೂರು: ಜಿಲಾಧಿಕಾರಿಯವರು ನಡೆಸಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜಿಟಿ ದೇವೇಗೌಡ ಮುಡಾದಿಂದ 50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆಯಾಗಿರುವ ನಿವೇಶನಗಳನ್ನು ವಾಪಸ್ಸು ಪಡೆಯಬೇಕು ಮತ್ತು ಅರ್ಹರಿಗೆ ಅವುಗಳನ್ನು ನೀಡಬೇಕೆಂದು ಸಭೆಯಲ್ಲಿ ಎಲ್ಲ ಸದಸ್ಯರು ಹೇಳಿದರೆಂದು ತಿಳಿಸಿದರು. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿರುವ ದೇವೇಗೌಡರು ಮುಡಾ ಸದಸ್ಯರೂ ಆಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜಿಟಿ ದೇವೇಗೌಡ ಮತ್ತು ತನ್ನ ನಡುವೆ ಮುನಿಸಿರುವದನ್ನು ಅಂಗೀಕರಿಸಿದ ಹೆಚ್​ಡಿ ಕುಮಾರಸ್ವಾಮಿ