ಜಿಟಿ ದೇವೇಗೌಡ ಮತ್ತು ತನ್ನ ನಡುವೆ ಮುನಿಸಿರುವದನ್ನು ಅಂಗೀಕರಿಸಿದ ಹೆಚ್​ಡಿ ಕುಮಾರಸ್ವಾಮಿ

ಜಿಟಿ ದೇವೇಗೌಡ ಮತ್ತು ತನ್ನ ನಡುವೆ ಮುನಿಸಿರುವದನ್ನು ಅಂಗೀಕರಿಸಿದ ಹೆಚ್​ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 02, 2024 | 1:51 PM

ಕುಮಾರಸ್ವಾಮಿ ಮತ್ತು ಜಿಟಿಡಿ ನಡುವೆ ಮುನಿಸು, ಸಿಟ್ಟು ಹೊಸದೇನಲ್ಲ ಅಂತ ಮಾಧ್ಯಮದವರಿ ಹೇಳಿದಾಗ, ತಪ್ಪಿಸಕೊಳ್ಳುವುದು ಸಾಧ್ಯವಿಲ್ಲ ಅಂತ ಮನಗಂಡ ಕುಮಾರಸ್ವಾಮಿ ನಗುತ್ತಾ, ಮಾಧ್ಯಮದವರಿಗೆ ಮರೆಯಾದದ್ದು ಏನಿದೆ? ತಮಗಿಂತ ಜಾಸ್ತಿ ಅವರಿಗೆ ಹೊತ್ತಿರುತ್ತದೆ ಅಂತ ಹೇಳಿ ನಗುತ್ತಲೇ ಅಲ್ಲಿಂದ ಹೊರಟರು.

ಮೈಸೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ನಡುವೆ ಎಲ್ಲವೂ ಸರಿಯಿಲ್ಲ, ಮುನಿಸು ಶುರವಾಗಿದೆ ಅನ್ನೋದು ಇವತ್ತು ಸಾಬೀತಾಗಿದೆ. ಜಿಟಿಡಿ ಯಾಕೆ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಲು ಚನ್ನಪಟ್ಟಣಕ್ಕೆ ಹೋಗುತ್ತಿಲ್ಲ ಅಂತ ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ಏನೇನೋ ಸಬೂಬು ಮತ್ತು ಹಾರಿಕೆಯ ಉತ್ತರ ನೀಡುವ ಪ್ರಯತ್ನ ಮಾಡಿದರು. ಅವರು ಪೂರ್ವನಿಶ್ಚಿತ ಕೆಲಸಗಳಲ್ಲಿ ಬ್ಯೂಸಿ, ಚನ್ನಪಟ್ಟಣದಲ್ಲಿ ಪ್ರಚಾರಕ್ಕಾಗಿ ಓವರ್​ಲೋಡೆಡ್ ಮುಖಂಡರಿದ್ದಾರೆ ಅಂತೆಲ್ಲ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೂ ಪತ್ರಕರ್ತರು ಸತ್ಯ ಹೊರಹಾಕಿಸದೆ ಬಿಡಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಟುಕರಿಗೆ ಕಣ್ಣೀರು ಬರಲ್ಲ, ಕೇವಲ ಮಾತೃಹೃದಯ ಇರುವವರಿಗೆ ಮಾತ್ರ ಬರುತ್ತದೆ: ಕುಮಾರಸ್ವಾಮಿ