ಭಾರವಾದ ಹೃದಯ ಹೊತ್ತು ಬಿಗ್ಬಾಸ್ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ
ಬಿಗ್ಬಾಸ್ ವೇದಿಕೆ ಮೇಲಿದ್ದಾಗಲೇ ಸುದೀಪ್ರ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಆ ನಂತರ ಅವರು ಮರಳಲಿಲ್ಲ. ತಾಯಿ ನಿಧನವಾದ ನೋವಿನಲ್ಲಿಯೇ ಸುದೀಪ್ ಬಿಗ್ಬಾಸ್ ವೇದಿಕೆಗೆ ಮರಳಿದ್ದಾರೆ. ಬಿಗ್ಬಾಸ್ ಕಡೆಯಿಂದ ಸುದೀಪ್ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಕಿಚ್ಚ ಸುದೀಪ್ ಬಿಗ್ಬಾಸ್ ವೇದಿಕೆ ಮೇಲಿದ್ದಾಗಲೇ ಅವರ ತಾಯಿ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಅಕ್ಟೋಬರ್ 20 ರಂದು ಸುದೀಪ್ ಅವರ ತಾಯಿ ಸರೋಜಮ್ಮನವರು ನಿಧನ ಹೊಂದಿದರು. ನೋವಿನಲ್ಲಿದ್ದ ಸುದೀಪ್ ಅಂದಿನ ವೀಕೆಂಡ್ ಪಂಚಾಯಿತಿ ನಡೆಸಿಕೊಡಲಿಲ್ಲ. ಅದಾದ ಮುಂದಿನ ವಾರದ ವೀಕೆಂಡ್ ಪಂಚಾಯ್ತಿಯನ್ನೂ ಸಹ ನಡೆಸಿಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಸುದೀಪ್ ತಮ್ಮ ಜವಾಬ್ದಾರಿ ನಿರ್ವಹಿಸಲು ಬಿಗ್ಬಾಸ್ ಮನೆಗೆ ಮರಳಿದ್ದಾರೆ. ತಾಯಿ ಅಗಲಿದ ನೋವನ್ನು ಎದೆಯಲ್ಲಿಟ್ಟುಕೊಂಡು ಬಿಗ್ಬಾಸ್ ವೇದಿಕೆಗೆ ಸುದೀಪ್ ಮರಳಿದ್ದು, ಬಿಗ್ ಬಾಸ್ ವತಿಯಿಂದ ಸುದೀಪ್ ಅವರ ತಾಯಿಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos