ರಾಷ್ಟ್ರಧ್ವಜ, ಕನ್ನಡ ಧ್ವಜವನ್ನು ಹಾರಿಸಲು ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಯಾವತ್ತೂ ಬಂದಿಲ್ಲ: ಶಿವಕುಮಾರ್

ರಾಷ್ಟ್ರಧ್ವಜ, ಕನ್ನಡ ಧ್ವಜವನ್ನು ಹಾರಿಸಲು ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಯಾವತ್ತೂ ಬಂದಿಲ್ಲ: ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 02, 2024 | 12:05 PM

ಯೋಗೇಶ್ವರ್ ಮಾಡಿದ ಕೆರೆ ತುಂಬಿಸುವ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳುವ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಏನೂ ಮಾಡಿಲ್ಲ, ಕೆರೆ ತುಂಬಿಸುವ ಯೋಜನೆಗೆ ಹಣ ನೀಡಿದ್ದು ತಮ್ಮ ಸರ್ಕಾರ, ಒಂದು ರಸ್ತೆಯನ್ನು ಮಾಡಿಸುವುದು ಸಹ ಕುಮಾರಸ್ವಾಮಿಗೆ ಸಾಧ್ಯವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಮಂಗಳೂರು: ರಾಜ್ಯದಲ್ಲಿ ಕೆಲದಿನಗಳ ಮಟ್ಟಿಗೆ ಕಣ್ಣೀರಿನ ಮೇಲೆ ಚರ್ಚೆ ನಡೆಯೋದು ಗ್ಯಾರಂಟಿ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಚ್ ಡಿ ಕುಮಾರಸ್ವಾಮಿಗೆ ಚುನಾವಣೆ ಸಮಯದಲ್ಲಿ ಮಾತ್ರ ಕಣ್ಣೀರು ಬರುತ್ತದೆ, ಚನ್ನಪಟ್ಟಣ ಮತ್ತು ರಾಮನಗರ ಜನ ಹಲವಾರು ಬಾರಿ ತಮ್ಮ ಪ್ರತಿನಿಧಿಯಾಗಿ ಸಂಸತ್ತು ಮತ್ತು ವಿಧಾನಸಭೆಗೆ ಕಳಿಸಿದರು, ಆದರೆ ಅವರು ಯಾವತ್ತೂ ರಾಷ್ಟ್ರಧ್ವಜವನ್ನಾಗಲೀ, ರಾಜ್ಯೋತ್ಸವದಂದು ಕನ್ನಡ ಧ್ವಜವನ್ನಾಗಲೀ ಹಾರಿಸಲು ಅಲ್ಲಿಗೆ ಹೋಗಲಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸರ್ಕಾರದ ತೊಳಲಾಟವನ್ನು ಹೊರಹಾಕಿದ ಶಿವಕುಮಾರ್​ರನ್ನು ಅಭಿನಂದಿಸುತ್ತೇನೆ: ವಿ ಸೋಮಣ್ಣ