Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತಾಂಧ ಜಮೀರ್ ತಾನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಮಂತ್ರಿ ಅಂದುಕೊಂಡಂತಿದೆ: ರೇಣುಕಾಚಾರ್ಯ

ಮತಾಂಧ ಜಮೀರ್ ತಾನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಮಂತ್ರಿ ಅಂದುಕೊಂಡಂತಿದೆ: ರೇಣುಕಾಚಾರ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 02, 2024 | 10:24 AM

ರೈತರಿಗೆ ನೋಟೀಸ್ ನೀಡುವ ಕೆಲಸವನ್ನು ತಾನಾಗಿ ಮಾಡುತ್ತಿಲ್ಲ, ವಕ್ಫ್ ಸಚಿವನಾದ ಮೇಲೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ನೋಟೀಸ್​ಗಳನ್ನು ನೀಡುತ್ತಿರುವುದಾಗಿ ಸಾರ್ವಜನಿಕ ಸಭೆಯೊಂದರಲ್ಲಿ ಸಚಿವ ಹೇಳುತ್ತಿರುವ ವಿಡಿಯೋವನ್ನು ಮಾಧ್ಯಮ ಕೆಮೆರಾಗಳ ಮುಂದೆ ರೇಣುಕಾಚಾರ್ಯ ಪ್ಲೇ ಮಾಡಿದರು.

ದಾವಣಗೆರೆ: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ರೈತರ ಫಲವತ್ತಾದ ಭೂಮಿ, ಹಿಂದೂಗಳ ಸ್ಮಶಾನ ಮತ್ತು ಮಠಮಾನ್ಯಗಳ ಜಾಗಗಳನ್ನು ಕಬಳಿಸಲು ಹುನ್ನಾರ ಮಾಡಿರುವ ವಕ್ಫ್ ಸಚಿವ ಜಮೀರ್ ಅಹ್ಮದ್ ಒಬ್ಬ ಮತಾಂಧ ಎಂದು ಹೇಳಿದರು. ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಅವರನ್ನು ಬೆದರಿಸಿ ನೋಟೀಸ್ ಗಳನ್ನು ನೀಡುತ್ತಿರುವ ಜಮೀರ್ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ಮಂತ್ರಿ ಅನ್ನೋದನ್ನು ಮರೆಯಬಾರದು ಎಂದು ರೇಣುಕಾಚಾರ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜ್ಯದಲ್ಲಿ‌ ಬಿಜೆಪಿ‌ಗೆ 66 ಸ್ಥಾನಕ್ಕೆ ಬರಲು ರೇಣುಕಾಚಾರ್ಯ ಕಾರಣ; ಬಿಜೆಪಿ ಹಿರಿಯ ನಾಯಕ ಆಕ್ರೋಶ