ರಾಜ್ಯದಲ್ಲಿ‌ ಬಿಜೆಪಿ‌ಗೆ 66 ಸ್ಥಾನಕ್ಕೆ ಬರಲು ರೇಣುಕಾಚಾರ್ಯ ಕಾರಣ; ಬಿಜೆಪಿ ಹಿರಿಯ ನಾಯಕ ಆಕ್ರೋಶ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಈ ಹಿನ್ನಲೆ ಬಿಜೆಪಿಯ ಹಿರಿಯ ನಾಯಕ ವೀರೇಶ್​ ಹನಗವಾಡಿ ಅವರು ಕಿಡಿಕಾರಿದ್ದು, ರಾಜ್ಯದಲ್ಲಿ‌ ಬಿಜೆಪಿ‌ 66 ಸ್ಥಾನಗಳಿಗೆ ಬರಲು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ‌ ಬಿಜೆಪಿ‌ಗೆ 66 ಸ್ಥಾನಕ್ಕೆ ಬರಲು ರೇಣುಕಾಚಾರ್ಯ ಕಾರಣ; ಬಿಜೆಪಿ ಹಿರಿಯ ನಾಯಕ ಆಕ್ರೋಶ
ರೇಣುಕಾಚಾರ್ಯ, ವೀರೇಶ್​ ಹನಗವಾಡಿ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 21, 2024 | 4:24 PM

ದಾವಣಗೆರೆ, ಜೂ.21: ರಾಜ್ಯದಲ್ಲಿ‌ ಬಿಜೆಪಿ‌ 66 ಸ್ಥಾನಗಳಿಗೆ ಬರಲು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಕಾರಣ ಎಂದು ಬಿಜೆಪಿಯ ಹಿರಿಯ ನಾಯಕ ವೀರೇಶ್​ ಹನಗವಾಡಿ (Veeresh Hanagavadi) ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ‘ರೇಣುಕಾಚಾರ್ಯ ಅವರು ವೀರಶೈವ ಜಂಗಮ‌ ಜಾತಿಯಲ್ಲಿ ಹುಟ್ಟಿದವರು. ಜೊತೆಗೆ ವೀರಶೈವರಲ್ಲಿ ಇವರಿಗೆ ಗುರುವಿನ‌ ಸ್ಥಾನವಿದೆ. ಇಂತವರು ಪರಿಶಿಷ್ಟ ಜಾತಿಗೆ ಸೇರಿದ ಬೇಡ ಜಂಗಮ ಜಾತಿ‌ಪತ್ರ ಪಡೆದರು. ಇದರಿಂದ ಬಿಜೆಪಿ ಹೆಚ್ಚಿನ ಸೀಟು ಬರಲು ವಿಫಲವಾಯಿತು ಎಂದರು.

ರೇಣುಕಾಚಾರ್ಯ ಯಾವಾಗ ಪರಿಶಿಷ್ಟ ಜಾತಿಗೆ ಸೇರಿದ ಬೇಡ ಜಂಗಮ ಜಾತಿ‌ಪತ್ರ ಪಡೆದರೂ ಈ ಕಾರಣದಿಂದ ಇಡೀ ರಾಜ್ಯದಲ್ಲಿನ ದಲಿತರು ಬಿಜೆಪಿ ವಿರೋಧಿಗಳಾದರು.‌ ಕಳೆದ ವಿಧಾನ ಸಭೆ ಸಭೆ ಚುನಾವಣೆಯಲ್ಲಿ 66 ಸ್ಥಾನಕ್ಕೆ ಬಿಜೆಪಿ ಬರಲು ಇದೇ ಮುಖ್ಯವಾದ ಕಾರಣ. ಇದರ ಜೊತೆಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ, ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣರಾದರು ಎಂದು ಕಿಡಿಕಾರಿದರು.

ಇದನ್ನೂ ಓದಿ:ರೇಣುಕಾಚಾರ್ಯ ಸಹೋದರನಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಬಳಸದಂತೆ ನಿರ್ಬಂಧ‌ ವಿಸ್ತರಿಸಿದ ಹೈಕೋರ್ಟ್

ಈ ಹಿಂದೆ ಅಮಿತ್ ಶಾ ಅವರ ಜೊತೆ ಸಭೆ ಮಾಡಿದಾಗ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ವಿರುದ್ಧ ರೇಣುಕಾಚಾರ್ಯ ದೂರು ಹೇಳಿದ್ದರು. ಈ ವೇಳೆ ಸ್ವತಃ ಅಮಿತ್ ಶಾ ಅವರೇ ರೇಣುಕಾಚಾರ್ಯ ಅವರಿಗೆ ಕೈ ಮುಗಿದು ಕ್ಷಮೆ ಕೇಳಿದ್ದರು. ಶಾ ಅವರು ಕೈ ಮುಗಿದು ಕ್ಷಮೆ ಕೇಳಿದಕ್ಕಾದರೂ ಚೆನ್ನಾಗಿ ಚುನಾವಣೆ ಮಾಡಬೇಕಿತ್ತು. ಆದ್ರೆ ಮಾಡಿಲ್ಲ. ಈ ವಿಚಾರವನ್ನ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇವೆ ಎಂದು ವೀರೇಶ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:23 pm, Fri, 21 June 24