ರೈತಾಪಿ ಜನರೇ ದಯವಿಟ್ಟು ರಸ್ತೆಯಲ್ಲಿ ಕಣ ಹಾಕಬೇಡಿ, ಗರ್ಭಿಣಿಯಿದ್ದ ಆ್ಯಂಬುಲೆನ್ಸ್ ರಸ್ತೆ ಮಧ್ಯೆ ಸಿಲುಕಿ ಪರದಾಟ

Edited By: ಆಯೇಷಾ ಬಾನು

Updated on: Jan 20, 2022 | 8:26 AM

ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್ ಹುರಳಿ ಸೊಪ್ಪು ಟೈರಿಗೆ ಸುತ್ತಿಕೊಂಡು ತೊಂದರೆ ಕೊಟ್ಟಿದೆ. ವಾಹನ ಮುಂದಕ್ಕೆ ಹೋಗಲಾರದೆ ಪರದಾಡಿದ ಡ್ರೈವರು.

ಒಣಗಿಸಲು ರಸ್ತೆ ಮೇಲೆ ಹಾಕಿದ್ದ ಹುರುಳಿ ಹುಲ್ಲು ಚಕ್ರಕ್ಕೆ ಸಿಕ್ಕಿಹಾಕಿಕೊಂಡು ಅರ್ಧ ಗಂಟೆ ಆಂಬುಲೆನ್ಸ್ ರಸ್ತೆಯಲ್ಲೇ ನಿಂತ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೂಡ್ಲಾಪುರ ಬಳಿ ನಡೆದಿದೆ. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್ ಹುರಳಿ ಸೊಪ್ಪು ಟೈರಿಗೆ ಸುತ್ತಿಕೊಂಡು ತೊಂದರೆ ಕೊಟ್ಟಿದೆ. ವಾಹನ ಮುಂದಕ್ಕೆ ಹೋಗಲಾರದೆ ಪರದಾಡಿದ ಡ್ರೈವರು. ಸ್ಥಳೀಯರ ನೆರವಿನಿಂದು ಹುರಳಿ ತೆರವು ಮಾಡಲಾಗಿದ್ದು ಅರ್ಧ ಗಂಟೆ ಕಾರ್ಯಾಚರಣೆ ನಂತರ ಆಂಬುಲೆನ್ಸ್ ಮುಂದೆ ಸಾಗಿದೆ. ಆದ್ರೆ ಗರ್ಭಿಣಿ ಆಂಬುಲೆನ್ಸ್​ನಲ್ಲೇ ನೋವು ತಿಂದದ್ದು ಮಾತ್ರ ವಿಪರ್ಯಾಸ.

Loading...
Unable to load recommendations.
Follow Us
TV9 Web

TV9 Kannada

Read More