ಟಿವಿ9 ಎಕ್ಸ್‌ಪೋದಲ್ಲಿ ತಪಸ್ವಿನಿ-ಶ್ರೀರಾಮ್; ಪ್ರೇಮದ ಊರಲಿ ಸಕಸ್ಸ್ ಸೆಲೆಬ್ರೇಷನ್
ನಟಿ ತಪಸ್ವಿನಿ ಮತ್ತು ನಟ ಶ್ರೀರಾಮ್ ಪ್ರೇಮದ ಊರಲ್ಲಿ ಚಿತ್ರದ ಭರ್ಜರಿ ಯಶಸ್ಸಿನ ಬಗ್ಗೆ ಟಿವಿ9 ಲೈಫ್‌ಸ್ಟೈಲ್, ಆಟೋಮೊಬೈಲ್ ಫರ್ನಿಚರ್ ಎಕ್ಸ್‌ಪೋದಲ್ಲಿ ಸಂತಸ ಹಂಚಿಕೊಂಡರು. ಪ್ರೇಕ್ಷಕರ ಪ್ರೀತಿ, ತಂಡದ ಶ್ರಮವನ್ನು ಶ್ಲಾಘಿಸಿದರು. ಶಂಕರ್ ನಾಗ್ ಹೋಲಿಕೆಯ ಬಗ್ಗೆ ಶ್ರೀರಾಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಯೋಜನೆಗಳು ಮತ್ತು ವೀಕ್ಷಕರ ಭರವಸೆಗಳ ಕುರಿತು ಮಾತನಾಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟಿವಿ9 ಲೈಫ್‌ಸ್ಟೈಲ್, ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ 2026ಕ್ಕೆ ‘ಪ್ರೇಮದ ಊರಲಿ’ ಚಲನಚಿತ್ರದ ನಾಯಕ ನಟ ಶ್ರೀರಾಮ್ ಮತ್ತು ನಾಯಕಿ ನಟಿ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಚಿತ್ರದ ಭರ್ಜರಿ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡರು.
ನಟಿ ತಪಸ್ವಿನಿ ಮಾತನಾಡಿ, ‘ಕರ್ನಾಟಕದ ಜನರು ಪ್ರೇಮದ ಊರಲಿ ಚಿತ್ರಕ್ಕೆ ನೀಡಿದ ಪ್ರೀತಿ ನಿಜಕ್ಕೂ ಆಶೀರ್ವಾದ. ಈ ಯಶಸ್ಸನ್ನು ಯಾರೂ ನಿರೀಕ್ಷಿಸಿರಲಿಲ್ಲ. ನಿರ್ದೇಶಕರು ಮತ್ತು ನಿರ್ಮಾಣ ತಂಡಕ್ಕೆ ಈ ಗೆಲುವಿನ ಬಹುಪಾಲು ಶ್ರೇಯಸ್ಸು ಸಲ್ಲುತ್ತದೆ. ಮಿಸ್ಟರ್ ಜ್ಯಾಕ್ ಚಿತ್ರ ಡಿಸೆಂಬರ್ 4 ರಂದು ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು. ನಟ ಶ್ರೀರಾಮ್, ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಜನರೇ ಈ ಚಿತ್ರವನ್ನು ದೊಡ್ಡ ಬ್ಲಾಕ್‌ಬಸ್ಟರ್ ಮಾಡಿದ್ದಾರೆ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
