ವರಮಹಾಲಕ್ಷ್ಮಿ ಹಬ್ಬ: ಬೆಂಗಳೂರಲ್ಲಿ ಹೂಗಳ ಬೆಲೆ ಇತಿಹಾಸದಲ್ಲಿ ಹಿಂದೆಂದೂ ಕಾಣದಷ್ಟು ದುಬಾರಿ!
ಮತ್ತೊಬ್ಬ ಹೂವಿನ ವ್ಯಾಪಾರಿ ಅನುಪಮ ಹೇಳುವಂತೆ ಜನ ಸಂತೆಗೆ ಬಂದು ನೂಕುನುಗ್ಗಲುನಂಥ ಸ್ಥಿತಿ ಉಂಟಾದರೂ ವ್ಯಾಪಾರ ಮಾತ್ರ ನೆಲಕಚ್ಚಿದೆ. ಜನ ಹೂವಿನ ದರ ಕೇಳಿ ಗಾಬರಿಯಾಗುತ್ತಿದ್ದಾರೆ ಮತ್ತು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಲಕ್ಷಾಂತರ ರೂ. ಬಂಡವಾಳ ಹೂಡಿರುವ ಹೂವಾಡಿಗರಿಗೆ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಅನುಪಮ ಹೇಳುತ್ತಾರೆ.
ಬೆಂಗಳೂರು: ಇವತ್ತು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬ ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತಿದೆ. ದಕ್ಷಿಣ ಕರ್ನಾಟಕದ ಜನರಿಗೆ ಇದು ದೊಡ್ಡ ಹಬ್ಬಗಳಲ್ಲೊಂದು. ವರಮಹಾಲಕ್ಷ್ಮಿ ಪೂಜೆಗೆ ಜನ ನಿನ್ನೆಯಿಂದ ತಯಾರಿ ನಡೆಸುತ್ತಿದ್ದಾರೆ. ಹೂವು ಹಣ್ಣು ಖರೀದಿಸಲು ನಗರದ ನಿವಾಸಿಗಳು ಕೆಆರ್ ಮಾರ್ಕೆಟ್ ದಾಂಗುಡಿ ಇಟ್ಟಿದ್ದಾರೆ ಆದರೆ ಬೇರೆ ಬೇರೆ ಹೂಗಳ ದರ ಕೇಳಿ ಆಘಾತಕ್ಕೊಳಗಾಗುತ್ತಿದ್ದಾರೆ. ಹೂವಾಡಿಗ ಗೋವಿಂದರಾಜ್ ಜೊತೆ ನಮ್ಮ ವರದಿಗಾರ ಮಾತಾಡಿದ್ದು, ಪೂಜೆಗೆ ಅವಶ್ಯವಿರುವ ಹೂವುಗಳ ಬೆಲೆ ಹಿಂದೆಂದೂ ಕಾಣದಷ್ಟು ದುಬಾರಿಯಾಗಿದೆಯೆಂದು ಹೇಳುತ್ತಾರೆ. ಸುಗಂಧರಾಜ ಹೂವಿನ ಬೆಲೆ ಕೆಜಿಗೆ ₹ 500, ಕನಕಾಂಬರ ₹ 1,400, ಮಲ್ಲಿಗೆ ₹ 2,000-ಹೀಗೆ ಎಲ್ಲ ಹೂಗಳ ಬೆಲೆ ಬಹಳ ದುಬಾರಿ. ನಿನ್ನೆ ಜನ ಮಾರ್ಕೆಟ್ ಬಂದಿದ್ದರೇ ಹೊರತು ವ್ಯಾಪಾರವೇನೂ ಜೋರಾಗಿರಲಿಲ್ಲ ಅದರೆ ಇವತ್ತು ಅವರು ತಮ್ಮ ಯೋಗ್ಯತೆಗೆ ಅನುಸಾರ ಹೂ ಖರೀದಿಸುತ್ತಿದ್ದಾರೆ ಎಂದು ಗೋವಿಂದರಾಜ್ ಹೇಳುತ್ತಾರೆ. ಅವರು ಹೇಳುವ ಪ್ರಕಾರ ಒಂದು ಜೊತೆ ಹೂವಿನ ಹಾರ ಖರೀದಿಸಬೇಕಾದರೆ ಗ್ರಾಹಕರು ₹ 4,000 ತೆರಬೇಕು, ಗುಲಾಬಿ ಹೂಗಳ ಹಾರ ಬೇಕೆಂದರೆ ₹ 3,000!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ ಎಫೆಕ್ಟ್: ಹೂ-ಹಣ್ಣು ಬೆಲೆ ಏರಿಕೆ, ಕೆಆರ್ ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟಿದೆ?