ವರಮಹಾಲಕ್ಷ್ಮಿ ಹಬ್ಬ ಎಫೆಕ್ಟ್: ಹೂ-ಹಣ್ಣು ಬೆಲೆ ಏರಿಕೆ, ಕೆಆರ್ ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟಿದೆ?
Varamahalakshmi Festival 2023: : ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಸಿದ್ಧತೆಗಳು ಶುರುವಾಗಿವೆ. ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹೂಗಳ ದರ ಬಲು ಏರಿಕೆಯಾಗಿದ್ದು ಬಜೆಟ್ ನೋಡಿಕೊಂಡು ಜನ ಖರೀದಿಗೆ ಮುಂದಾಗಿದ್ದಾರೆ. ದುಬಾರಿ ದುನಿಯಾದ ಮಧ್ಯೆಯೂ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಕೆಆರ್ ಮಾರುಕಟ್ಟೆಯಲ್ಲಿ ಹೂ-ಹಣ್ಣಿನ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಆ.24: ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ(Varamahalakshmi Festival 2023) ಭರ್ಜರಿ ಸಿದ್ಧತೆಗಳು ಶುರುವಾಗಿವೆ. ಕೆ.ಆರ್.ಮಾರ್ಕೆಟ್ ನಲ್ಲಿ(KR Market) ಹಬ್ಬದ ಖರೀದಿ ಜೋರಾಗಿದ್ದು ಹೂ ಹಣ್ಣು ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಹಬ್ಬದ ಹಿನ್ನೆಲೆ ಹಣ್ಣು, ಹೂವಿನ ದರ ಗಗನಕ್ಕೇರಿದೆ. ಹಬ್ಬದ ಸಂಭ್ರಮದಲ್ಲಿದ್ದವರಿಗೆ ಬೆಲೆಯೇರಿಕೆ ಬಿಸಿ ತಟ್ಟಿದೆ. ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹೂಗಳ ದರ ಬಲು ಏರಿಕೆಯಾಗಿದ್ದು ಬಜೆಟ್ ನೋಡಿಕೊಂಡು ಜನ ಖರೀದಿಗೆ ಮುಂದಾಗಿದ್ದಾರೆ. ದುಬಾರಿ ದುನಿಯಾದ ಮಧ್ಯೆಯೂ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಕೆಆರ್ ಮಾರುಕಟ್ಟೆಯಲ್ಲಿ ಹೂ-ಹಣ್ಣಿನ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಹೂವಿನ ದರ ಬಲು ಭಾರ
- ಕನಕಾಂಬರ ಕೆಜಿಗೆ 1,200 ರಿಂದ 1,500
- ಮಲ್ಲಿಗೆ ಕೆಜಿಗೆ 600 ರಿಂದ 800 ರೂ.
- ಗುಲಾಬಿ ಕೆಜಿಗೆ 150 ರಿಂದ 200 ರೂ.
- ಚಿಕ್ಕ ಹೂವಿನ ಹಾರ 150ರಿಂದ 200 ರೂ.
- ದೊಡ್ಡ ಹೂವಿನ ಹಾರ 300 ರಿಂದ 500 ರೂ.
- ಸೇವಂತಿಗೆ ಕೆಜಿಗೆ 250 ರಿಂದ 300 ರೂ.
- ತಾವರೆ ಹೂ ಜೋಡಿ 50 ರಿಂದ 100 ರೂ.
ಹಬ್ಬಕ್ಕೆ ಗಗನಕ್ಕೇರಿದ ಹಣ್ಣುಗಳು
- ಏಲಕ್ಕಿ ಬಾಳೆ -120 ರಿಂದ 140 ರೂ.
- ಸೀಬೆ -120 ರೂ.
- ಸೇಬು -200-300 ರೂ.
- ಕಿತ್ತಲೆ -150 ರಿಂದ 200 ರೂ.
- ದ್ರಾಕ್ಷಿ -180-200 ರೂ.
- ಪೈನಾಪಲ್ -80/1pc ರೂ.
- ದಾಳಿಂಬೆ -150-200 ರೂ.
ಇದನ್ನೂ ಓದಿ: Varalakshmi Vrat 2023: ವರಮಹಾಲಕ್ಷ್ಮೀ ಹಬ್ಬ: ಪೂಜಾ ತಯಾರಿ ಹೇಗಿರಬೇಕು? ಮಾಡಿಕೊಳ್ಳಬೇಕಾದ ಸಿದ್ಧತೆಗಳಾವವು?
ಇತರೆ ವಸ್ತುಗಳ ಬೆಲೆ
- ಬಾಳೆ ಕಂಬ -ಜೋಡಿಗೆ-50 ರೂ.
- ಮಾವಿನ ತೋರಣ -20 ರೂ.
- ವಿಳ್ಯದೆಲೆ -100 ಕ್ಕೆ 150 ರೂ.
- ತೆಂಗಿನಕಾಯಿ -5ಕ್ಕೆ 100 ರೂ.
ಇಂದಿನ ತರಕಾರಿ ಬೆಲೆ
- ‘ಕ್ಯಾರೆಟ್ – 80kg
- ಮೂಲಂಗಿ – 30 kg
- ಬೀನ್ಸ್ – 60 kg
- ಬೆಂಡೆಕಾಯಿ – 30 kg
- ಹೀರೇಕಾಯಿ – 40 kg
- ಬಿಟ್ರೋಟ್ – 40 kg
- ಬಟಾಣಿ – 80 kg
- ನುಗ್ಗೆ ಕಾಯಿ – 80 kg
- ಬದನೆಕಾಯಿ – 40 kg
- ನವಿಲು ಕೋಸು – 60 kg
- ಅವರೆಕಾಯಿ – 40 kg
- ಕ್ಯಾಪ್ಸಿಕಮ್ – 60 kg
- ಈರುಳ್ಳಿ – 30 kg
- ಬೆಳ್ಳುಳ್ಳಿ – 200 kg
- ಬಿಟ್ರೋಟ್ – 40 kg
- ಟೊಮಾಟೋ – 30 kg
- ಸೌತೆಕಾಯಿ – 30 kg
- ಆಲುಗೆಡ್ಡೆ – 30 kg
- ಹೂ ಕೋಸು – 40 kg
- ದಪ್ಪ ಮೆಣಸಿಕನಾಯಿ – 60 kg
- ಹಾಗಲಕಾಯಿ – 40 kg
- ಕುಂಬಳಕಾಯಿ – 20kg
- ಸೋರೆಕಾಯಿ – 30 kg
- ಹಸಿಮೆಣಸಿನಕಾಯಿ – 60 kg
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ