Varalakshmi Vrat 2023: ವರಮಹಾಲಕ್ಷ್ಮೀ ಹಬ್ಬ: ಪೂಜಾ ತಯಾರಿ ಹೇಗಿರಬೇಕು? ಮಾಡಿಕೊಳ್ಳಬೇಕಾದ ಸಿದ್ಧತೆಗಳಾವವು?

ವರಮಹಾಲಕ್ಷ್ಮೀ ಹಬ್ಬದ ಆಚರಣೆ ಪ್ರತಿ ಪ್ರದೇಶಗಳಿಗೂ ಬೇರೆ ಬೇರೆಯಾಗಿರಬಹುದು. ಕೆಲವು ಕಡೆಗಳಲ್ಲಿ ಕಲಶಕ್ಕೆ ಸೀರೆಯನ್ನು ತೊಡಿಸಿ, ಲಕ್ಷ್ಮೀ ದೇವಿಯನ್ನು ಆಭರಣಗಳಿಂದ ಅಲಂಕರಿಸಲಾಗುತ್ತದೆ. ವರಮಹಾಲಕ್ಷ್ಮೀ ವ್ರತದ ದಿನ ಪೂಜಾ ತಯಾರಿ ಹೇಗಿರಬೇಕು? ಮುಂಚಿತವಾಗಿ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

Varalakshmi Vrat 2023: ವರಮಹಾಲಕ್ಷ್ಮೀ ಹಬ್ಬ: ಪೂಜಾ ತಯಾರಿ ಹೇಗಿರಬೇಕು? ಮಾಡಿಕೊಳ್ಳಬೇಕಾದ ಸಿದ್ಧತೆಗಳಾವವು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:Aug 24, 2023 | 9:45 AM

ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು (Varalakshmi Vrat) ಆಚರಣೆ ಮಾಡಲಾಗುತ್ತದೆ. ಮಹಿಳೆಯರು ಈ ದಿನ ಕಲಶವನ್ನಿಟ್ಟು ಅದನ್ನು ಲಕ್ಷ್ಮೀಯಂತೆ ಅಲಂಕರಿಸಿ ವಿಶೇಷವಾಗಿ ಪೂಜಿಸುತ್ತಾರೆ. ಈ ವ್ರತಕ್ಕೆ ಸಿದ್ಧತೆ ಹೇಗೆ ಮಾಡಿಕೊಳ್ಳುವುದು? ಪೂಜೆಗೆ ಯಾವ ಯಾವ ಸಾಮಗ್ರಿಗಳು ಬೇಕಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.

– ಮೊದಲು ಲಕ್ಷ್ಮೀಯನ್ನು ಕೂರಿಸಲು ಕಲಶ ಖರೀದಿಸಿ. ಈ ಮೊದಲೇ ವರಮಹಾಲಕ್ಷ್ಮೀ ವ್ರತ ಆಚರಣೆ ಮಾಡಿಕೊಂಡು ಬಂದಿದ್ದರೇ ನೀವು ಹಿಂದಿನ ವರ್ಷ ಬಳಸಿದ ಕಲಶವನ್ನೇ ಚೆನ್ನಾಗಿ ತೊಳೆದು ಬಳಸಬಹುದು. ಇಲ್ಲವಾದಲ್ಲಿ ತಾಮ್ರ ಅಥವಾ ಬೆಳ್ಳಿಯ ಕಲಶ ಇಟ್ಟು ಅದಕ್ಕೆ ನೀರು ತುಂಬಿಸಿ ಸ್ವಲ್ಪ ಅಕ್ಕಿ ಸೇರಿಸಿ ಜೊತೆಗೆ ಮನೆಯಲ್ಲಿರುವ ಬೆಳ್ಳಿ, ಚಿನ್ನ ಅಥವಾ ಬಳಕೆಯಲ್ಲಿರುವ ನಾಣ್ಯಗಳನ್ನು ಸೇರಿಸಬೇಕು. ಇದನ್ನು ತಯಾರಿಸುವ ವಿಧಾನ ಪ್ರತಿ ಪದೇಶಗಳಿಗೂ ಬೇರೆ ಬೇರೆಯಾಗಿರಬಹುದು ಕೆಲವರು ಕಲಶದೊಳಗೆ ವೀಳ್ಯದೆಲೆಗಳು, ಅಡಿಕೆ, ಹಣ್ಣು, ಖರ್ಜೂರ ಇತ್ಯಾದಿಗಳನ್ನು ಬಳಸುತ್ತಾರೆ.

– ಕಲಶದ ಮೇಲ್ಭಾಗದಲ್ಲಿ 5 ಮಾವಿನ ಎಲೆಗಳನ್ನು ಹಾಕಿ. ಎಲೆಗಳು ಕಲಶದ ಬಾಯಿಗಳು ಸಂಪೂರ್ಣವಾಗಿ ಮುಚ್ಚಿರುವಂತೆ ನೋಡಿಕೊಳ್ಳಿ. ಮಾವಿನ ಎಲೆಗಳ ತುದಿಗಳು ನೆಲದ ಕಡೆಗೆ ಮುಖ ಮಾಡಿರಬೇಕು.

– ಮಾವಿನ ಎಲೆಗಳ ಮೇಲೆ ತೆಂಗಿನಕಾಯಿ ಇಡಬೇಕು. ಆ ತೆಂಗಿನಕಾಯಿಯ ಜುಟ್ಟು ಮೇಲ್ಮುಖವಾಗಿರಬೇಕು.

– ತೆಂಗಿನಕಾಯಿಯ ಮೇಲೆ ಅರಿಶಿನದಿಂದ ಲಕ್ಷ್ಮೀಯ ಮುಖ ಮಾಡಿ ಶೃಂಗಾರ ಮಾಡಬಹುದು. ಕೆಲವರು ತೆಂಗಿನಕಾಯಿಗೆ ಲಕ್ಷ್ಮೀಯ ಬೆಳ್ಳಿ ಮುಖವಾಡವಿಟ್ಟು ಒಡವೆ ಹಾಕಿ ಶೃಂಗರಿಸಿ ಪೂಜೆ ಮಾಡುತ್ತಾರೆ.

– ಕಲಶದ ಬಾಯಿಗೆ ನಿಮಗೆ ಸಹಾಯವಾಗುವಂತೆ ಕೋಲು ಅಥವಾ ತಂತಿ ಕಟ್ಟಿಕೊಂಡು ಅದಕ್ಕೆ ಸೀರೆ ಉಡಿಸಿ. ಕೆಂಪು ಅಥವಾ ಹಸಿರು ಸೀರೆ ಉಡಿಸುವುದು ಒಳ್ಳೆಯದು. ಇಲ್ಲವಾದಲ್ಲಿ ಪೇಟೆಯಲ್ಲಿ ಸಿಗುವ ರೆಡಿಮೇಡ್ ರೇಷ್ಮೆ ಸೀರೆಯನ್ನೂ ಕೂಡ ತರಬಹುದು.

ಇದನ್ನೂ ಓದಿ: ವರಮಹಾಲಕ್ಷ್ಮೀ ವ್ರತದಂದು ಮುತ್ತೈದೆಯರು ಯಾವ ರೀತಿಯ ಸೀರೆ, ಬಳೆ ಧರಿಸಿದರೆ ಸೂಕ್ತ? ಇಲ್ಲಿದೆ ಮಾಹಿತಿ

– ಸೀರೆ ಉಡಿಸಿದ ಬಳಿಕ ಕೊರಳಿಗೆ ಮಂಗಳ ಸೂತ್ರ ಹಾಕುವುದನ್ನು ಮರೆಯಬೇಡಿ.

– ಕಮಲ, ಮಲ್ಲಿಗೆ, ಗುಲಾಬಿಗಳಂತಹ ಲಕ್ಷ್ಮೀಗೆ ಪ್ರೀಯವಾದ ಹೂವುಗಳನ್ನು ಅಲಂಕಾರಕ್ಕೆ ಬಳಸಿ.

– ಕ್ಯಾಂಡಲ್​​​ಗಳಿಗಿಂತ ಮಣ್ಣಿನ ದೀಪ ಅದರಲ್ಲಿಯೂ ತುಪ್ಪದ ದೀಪ ಹಚ್ಚುವುದು ತುಂಬಾ ಶ್ರೇಷ್ಠ.

– ಇನ್ನು ಅರಿಶಿನ, ಕುಂಕುಮ, ಬಳೆ, ಹಣೆಗಿಡುವ ತಿಲಕ, ಕನ್ನಡಿ, ಬಾಚಣಿಕೆ ಎಲ್ಲವೂ ಪೂಜೆಗಿಡಬೇಕು.

– ನೈವೇದ್ಯವು ಅಷ್ಟೇ ಲಕ್ಷ್ಮೀಗೆ ಪ್ರೀಯವಾದ ಹಯಗ್ರೀವ, ಕಡಲೆಕಾಳು ಪಂಚಕಜ್ಜಾಯ, ಹೆಸರು ಬೆಳೆ ಪಂಚಕಜ್ಜಾಯ ಇತ್ಯಾದಿ ಪ್ರಸಾದಗಳನ್ನು ಮಾಡಬಹುದು. ಯಾವುದೇ ಕಾರಣಕ್ಕೂ ಅಕ್ಕಿ ಸೇರಿಸಿದ ಆಹಾರವನ್ನು ಮಾಡಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Sat, 19 August 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್