ಮೈಸೂರು ದಸರಾ 2023: ಅರಮನೆ ಆವರಣಕ್ಕೆ ಆಗಮಿಸಿದ ಆನೆಗಳಿಗೆ ಅರ್ಚಕರಿಂದ ಪೂಜೆ
ಗಜಗಳಿಗೆ ಇಂದು ಮಧ್ಯಾಹ್ನ ಅರಮನೆಯ ಜಯಮಾರ್ತಂಡ ದ್ವಾರಗಳಲ್ಲಿ ಪೂಜೆ ನಡೆಯಲಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ ಸಮಕ್ಷಮದಲ್ಲಿ ಆರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಜಂಬೂಸವಾರಿ ತಾಲೀಮಿಗಾಗಿ ಆನೆಗಳು ಇಂದಿನಿಂದ ಅರಮನೆ ಆವರಣದಲ್ಲೇ ಉಳಿಯಲಿವೆ. ಬಗೆಬಗೆಯ ಪೌಷ್ಟಿಕಾಂಶಭರಿತ ಭಕ್ಷ್ಯಗಳನ್ನು ಅವುಗಳಿಗೆ ನೀಡಿ ತಯಾರು ಮಾಡಲಾಗುತ್ತದೆ.
ಮೈಸೂರು: ರಾಜಕಾರಣದಲ್ಲಿ ಶಕ್ತಿ ಪ್ರದರ್ಶನ (power show) ಪದ ಬಹಳ ಸಲ ಬಳಕೆಯಾಗುತ್ತದೆ. ಹೆಚ್ಚು ಶಾಸಕರು ಮತ್ತು ಸಂಸದರನ್ನು ಹೊಂದಿರುವ ಪಕ್ಷದ ಪ್ರದರ್ಶನ, ವಿರೋಧ ಪಕ್ಷಗಳ ಶಕ್ತಿ ಪ್ರದರ್ಶನ-ಹೀಗೆ ಪದಬಳಕೆಯಾಗುತ್ತದೆ. ಆದರೆ, ಅಸಲು ಶಕ್ತಿ ಪದರ್ಶನ ಇಲ್ಲಿದೆ ಮಾರಾಯ್ರೇ. ಮೈಸೂರಿನ ರಸ್ತೆಗಳಲ್ಲಿ ಸರ್ವಾಲಂಕೃತಗೊಂಡು ರಾಜಗಾಂಭೀರ್ಯದಿಂದ ಅರಣ್ಯ ಭವನದ ಕಡೆ ನಡೆದು ಬರುತ್ತಿರುವ ಗಜಪಡೆಯನ್ನು (elephant troop) ನೋಡಿ ಕಣ್ತುಂಬಿಸಿಕೊಂಡುಬಿಡಿ. ಈ 8 ಆನೆಗಳು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Dasara festivities) ಜಂಬೂ ಸವಾರಿಯಲ್ಲಿ (Jumbo Savari) ಪಾಲ್ಗೊಳ್ಳಲಿವೆ. ಗಜಗಳಿಗೆ ಇಂದು ಮಧ್ಯಾಹ್ನ ಅರಮನೆಯ ಜಯಮಾರ್ತಂಡ ದ್ವಾರಗಳಲ್ಲಿ ಪೂಜೆ ನಡೆಯಲಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ (HC Mahadevappa) ಸಮಕ್ಷಮದಲ್ಲಿ ಆರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಜಂಬೂಸವಾರಿ ತಾಲೀಮಿಗಾಗಿ ಆನೆಗಳು ಇಂದಿನಿಂದ ಅರಮನೆ ಆವರಣದಲ್ಲೇ ಉಳಿಯಲಿವೆ. ಬಗೆಬಗೆಯ ಪೌಷ್ಟಿಕಾಂಶಭರಿತ ಭಕ್ಷ್ಯಗಳನ್ನು ಅವುಗಳಿಗೆ ನೀಡಿ ತಯಾರು ಮಾಡಲಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ