Video: ಅಮ್ಮನ ಬೆನ್ನೇರಿ ಜಂಬೂ ಸವಾರಿ ವೀಕ್ಷಿಸಿದ ಯುವರಾಜ ಆದ್ಯವೀರ

Updated on: Oct 02, 2025 | 5:21 PM

ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​​, ಸಂಸದ ಹಾಗೂ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​​​ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಮಹಾರಾಣಿ ತ್ರಿಷಿಕಾ ಅವರು ಕೂಡ ಈ ಜಂಬೂ ಸಾವರಿಯನ್ನು ವೀಕ್ಷಣೆ ಮಾಡಿದ್ದಾರೆ. ಯುವರಾಜ ಆದ್ಯವೀರ ಮಹಾರಾಣಿ ತ್ರಿಷಿಕಾ ಅವರ ಬೆನ್ನೇರಿ ಜಂಬೂ ಸವಾರಿಯನ್ನು ವೀಕ್ಷಣೆ ಮಾಡಿದ್ದಾರೆ.

ಮೈಸೂರು, ಅ.2: ಮೈಸೂರು ದಸರಾ (Mysore Dasara) ಜಂಬೂ ಸವಾರಿಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​​, ಸಂಸದ ಹಾಗೂ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​​​ ಚಾಲನೆ ನೀಡಿದ್ದಾರೆ. ಈ ವರ್ಷ ಅಭಿಮನ್ಯು ಆನೆಯು ಚಾಮುಂಡೇಶ್ವರಿ ದೇವಿ ಇರುವ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತೊಯ್ದಿದೆ. ಈ ದೃಶ್ಯವನ್ನು ವೀಕ್ಷಿಸಿದ ಮಹಾರಾಣಿ ತ್ರಿಷಿಕಾ ಸಂತಸವನ್ನು ವ್ಯಕ್ತಪಡಿಸಿದರು. ಈ ವೇಳೆ ಯುವರಾಜ ಆದ್ಯವೀರ ಮಹಾರಾಣಿ ತ್ರಿಷಿಕಾ ಅವರ ಬೆನ್ನೇರಿ ಜಂಬೂ ಸವಾರಿಯನ್ನು ವೀಕ್ಷಣೆ ಮಾಡಿದ್ದಾರೆ. ಮೆರವಣಿಗೆಯ ಹಾದಿಯುದ್ದಕ್ಕೂ ಸಾವಿರಾರು ಜನರು, ಪೊಲೀಸರ ಭದ್ರತಾ ವ್ಯವಸ್ಥೆಯೊಂದಿಗೆ ಜಂಬೂ ಸವಾರಿಯನ್ನು ವೀಕ್ಷಣೆ ಮಾಡಿದ್ದಾರೆ. ಇದರ ಜತೆಗೆ ಕರ್ನಾಟಕದ ವಿಭಿನ್ನ ಸಾಂಸ್ಕೃತಿಕ ಕಲಾ ತಂಡಗಳು ತಮ್ಮ ಸ್ತಬ್ಧಚಿತ್ರಗಳೊಂದಿಗೆ ಸಾಗಿ, ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 02, 2025 05:20 PM