ಖಾಸಗಿ ಸಾರಿಗೆ ಒಕ್ಕೂಟದ ಮುಷ್ಕರ; ಹೆದರಿಸುವ ತಂತ್ರಗಾರಿಕೆಗೆ ನಮ್ಮ ಸರ್ಕಾರ ಬಗ್ಗಲ್ಲ: ಡಿಕೆ ಶಿವಕುಮಾರ್
ಹೀಗೆ ಮುಷ್ಕರ ಮಾಡುತ್ತಾ ಪ್ರಯಾಣಿರಿಗೆ ತೊಂದರೆ ಉಂಟು ಮಾಡುವುದು ಸರಿಯಲ್ಲ, ಅವರ ಬಗ್ಗೆ ಸರ್ಕಾರಕ್ಕೆ ಖಂಡಿತವಾಗಿಯೂ ಸಹಾನುಭೂತಿ ಇದೆ, ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ತಮ್ಮ ಸರ್ಕಾರ ಖಂಡಿತವಾಗಿಯೂ ಮಾಡುತ್ತದೆ, ಆದರೆ ಹೆದರಿಸುವ ಬೆದರಿಸುವ ಪ್ರಯತ್ನ ಇದಾಗಿದ್ದರೆ, ಅವರಿಗಿದು ಒಳ್ಳೆಯದಲ್ಲ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು (Karnataka State Private Transport Associations) ಇಂದು ನಡೆಸುತ್ತಿರುವ ಮುಷ್ಕರಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar, DCM) ನಗರದಲ್ಲಿ ಪ್ರತಿಕ್ರಿಯೆ ನೀಡಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತಮ್ಮ ಸರ್ಕಾರದ ಶಕ್ತಿ ಯೋಜನೆಯಿಂದಾಗಿ (Shakti scheme) ಖಾಸಗಿ ಬಸ್ ಗಳ ಮಾಲೀಕರಿಗೆ ಸಮಸ್ಯೆ ಆಗಿರೋದು ನಿಜ. ಆದರೆ ಆ್ಯಪ್ ಅಗ್ರಿಗೇಟೆಡ್ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಗಳು ಮತ್ತು ಆಟೋರಿಕ್ಷಾ ಚಾಲಕರ ಸಂಸ್ಥೆಗಳು ನಡೆಸುತ್ತಿರುವ ಮುಷ್ಕರ ರಾಜಕೀಯ ಪ್ರೇರಿತವಾಗಿದೆ ಎಂದರು. ಹೀಗೆ ಮುಷ್ಕರ ಮಾಡುತ್ತಾ ಪ್ರಯಾಣಿರಿಗೆ ತೊಂದರೆ ಉಂಟು ಮಾಡುವುದು ಸರಿಯಲ್ಲ, ಅವರ ಬಗ್ಗೆ ಸರ್ಕಾರಕ್ಕೆ ಖಂಡಿತವಾಗಿಯೂ ಸಹಾನುಭೂತಿ ಇದೆ, ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ತಮ್ಮ ಸರ್ಕಾರ ಖಂಡಿತವಾಗಿಯೂ ಮಾಡುತ್ತದೆ, ಆದರೆ ಹೆದರಿಸುವ ಬೆದರಿಸುವ ಪ್ರಯತ್ನ ಇದಾಗಿದ್ದರೆ, ಅವರಿಗಿದು ಒಳ್ಳೆಯದಲ್ಲ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ