ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ಸು ಪಡೆಯುವ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

|

Updated on: Oct 11, 2024 | 6:43 PM

ಸಿದ್ದರಾಮಯ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಸಿಟಿ ರವಿಯವರ ಪ್ರಕರಣವನ್ನು ಹಿಂಪಡೆದಿದೆ ಅಂತ ಕನ್ನಡಿಗರು ಯೋಚಿಸುತ್ತಿದ್ದರೆ ತಪ್ಪಿಲ್ಲ. ಯಾಕೆಂದರೆ ಪ್ರಕರಣವನ್ನು ಗುರಾಣಿಯಾಗಿ ಬಳಸುವ ರಾಜ್ಯ ಸರ್ಕಾರದ ಇರಾದೆ ಸ್ಟಷ್ಟವಾಗುತ್ತಿದೆ. ಕಾಂಗ್ರೆಸ್ ನಾಯಕರು ಪ್ರದೇಪದೆ ರವಿಯವರ ಕೇಸನ್ನೂ ವಾಪಸ್ಸು ತಗೊಂಡಿಲ್ವಾ? ಅಂತ ಹೇಳುತ್ತಿರೋದನ್ನು ಗಮನಿಸಿ!

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರ 43 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ಸು ಪಡೆಯಲು ನಿರ್ಧರಿಸಿದ್ದನ್ನು ಸಮರ್ಥಿಸಿಕೊಂಡರು. ಹುಬ್ಬಳ್ಳಿ ಗಲಭೆ ಪ್ರಕರಣ ಮತ್ತು ಇತರ ಕೆಲವು ಪ್ರಕರಣಗಳು ರಾಜಕೀಯ ಪ್ರೇರಿತವಾಗಿದ್ದ ಕಾರಣ ಅವುಗಳನ್ನು ಹಿಂಪಡೆಯಲಾಗಿದೆ, ಬಿಜೆಪಿ ನಾಯಕರು ಎಲ್ಲದಕ್ಕೂ ಕಾಮೆಂಟ್ ಮಾಡುತ್ತಾರೆ, ಆದರೆ ಸಿಟಿ ರವಿಯವರ ಕೇಸ್ ಕೂಡ ವಾಪಸ್ಸು ಪಡೆಯಲಾಗಿದೆ, ಅದರ ಬಗ್ಗೆ ಯಾಕೆ ಅವರು ಕಾಮೆಂಟ್ ಮಾಡಲ್ಲ ಎಂದು ಖರ್ಗೆ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಇದು ಕಾಂಗ್ರೆಸ್‌ನ ನಿಜವಾದ ಬಣ್ಣ; ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಸ್ಸಾಂ ಸಿಎಂ ಟೀಕೆ

Follow us on