IPL 2025: ಪ್ರಿಯಾಂಶ್ ಸಿಡಿಲಬ್ಬರದ ಬ್ಯಾಟಿಂಗ್; ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ

Updated on: May 08, 2025 | 10:36 PM

Priyansh Arya: ಪಂಜಾಬ್ ಕಿಂಗ್ಸ್ ಆಟಗಾರ ಪ್ರಿಯಾಂಶ್ ಆರ್ಯ ಅವರು ಧರ್ಮಶಾಲಾದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಈ ಸೀಸನ್‌ನಲ್ಲಿ ಅವರು 415 ರನ್ ಗಳಿಸಿದ್ದು, ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರ ಪುಲ್ ಶಾಟ್‌ಗಳು ವಿಶೇಷವಾಗಿದ್ದು, 418ರ ಸ್ಟ್ರೈಕ್ ರೇಟ್‌ನಲ್ಲಿ 71 ರನ್ ಗಳಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಧರ್ಮಶಾಲಾ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಪ್ರಿಯಾಂಶ್ ಆರ್ಯ, ಡೆಲ್ಲಿ ಬೌಲರ್‌ಗಳ ಬೆವರಿಳಿಸಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಈ ಅರ್ಧಶತಕದಲ್ಲಿ ಅವರು 4 ಸಿಕ್ಸರ್‌ ಮತ್ತು 4 ಬೌಂಡರಿಗಳನ್ನು ಬಾರಿಸಿದರು. ಈ ಇನ್ನಿಂಗ್ಸ್‌ ಮೂಲಕ ಪ್ರಿಯಾಂಶ್ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಪ್ರಿಯಾಂಶ್ ಆರ್ಯ ಅವರ ಸ್ಟ್ರೋಕ್ ಅದ್ಭುತವಾಗಿದೆ. ಈ ಸೀಸನ್​ನಲ್ಲಿ ಅವರು 17 ಪುಲ್ ಶಾಟ್‌ಗಳನ್ನು ಆಡಿದ್ದು, 71 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಶಾಟ್‌ನಲ್ಲಿ ಪ್ರಿಯಾಂಶ್‌ ಅವರ ಸ್ಟ್ರೈಕ್ ರೇಟ್ 418 ಆಗಿದೆ. ಐಪಿಎಲ್‌ನ ಯಾವುದೇ ಸೀಸನ್​ನಲ್ಲಿ ಯಾವುದೇ ಆಟಗಾರ ಈ ಶಾಟ್‌ ಮೂಲಕ ಇಷ್ಟೊಂದು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿಲ್ಲ.

ಪ್ರಿಯಾಂಶ್ ಪ್ರದರ್ಶನ

ಪ್ರಿಯಾಂಶ್ ಆರ್ಯ ಈ ಸೀಸನ್​ನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ 415 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳು ಸೇರಿವೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್​ರನಲ್ಲಿ ರನ್ ಕಲೆಹಾಕಿರುವ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೂ ಪ್ರಿಯಾಂಶ್ ಆರ್ಯ ಪಾತ್ರರಾಗಿದ್ದಾರೆ. ಈ ವಿಚಾರದಲ್ಲಿ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿದ್ದು, ದಾಖಲೆಗಳ ಪ್ರಕಾರ, ಒಂದು ಸೀಸನ್​ನಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ ಆರಂಭಿಕ ಆಟಗಾರರಲ್ಲಿ ಪ್ರಿಯಾಂಶ್ ಆರ್ಯ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ