ರಾಜ್ಯ ಹೆದ್ದಾರಿಯಲ್ಲಿ ಕಾಮಗಾರಿ ಮುಗಿಯದೆ ಟೋಲ್ ವಸೂಲಿ ಆರೋಪ; ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ
ಯಲಹಂಕ(Yalahanka)ತಾಲೂಕಿನ ರಾಜನುಕುಂಟೆ ಬಳಿಯ ರಾಜ್ಯ ಹೆದ್ದಾರಿ (State Highway) ಯಲ್ಲಿ ಕಾಮಗಾರಿ ಮುಗಿಯದೆ ಟೋಲ್(Toll) ವಸೂಲಿ ಆರೋಪದ ಹಿನ್ನಲೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ, ಡಿ.17: ಜಿಲ್ಲೆಯ ಯಲಹಂಕ(Yalahanka)ತಾಲೂಕಿನ ರಾಜನುಕುಂಟೆ ಬಳಿಯ ರಾಜ್ಯ ಹೆದ್ದಾರಿ (State Highway) ಯಲ್ಲಿ ಕಾಮಗಾರಿ ಮುಗಿಯದೆ ಟೋಲ್(Toll) ವಸೂಲಿ ಆರೋಪದ ಹಿನ್ನಲೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿಯಲ್ಲಿ ಇನ್ನೂ ಕೆಲವೆಡೆ ರಸ್ತೆ ಕಾಮಗಾರಿ ಮುಗಿದಿಲ್ಲ, ಗ್ರಾಮಗಳ ಬಳಿ ಬೀದಿ ದೀಪ ಇಲ್ಲ ಸ್ಕೈವಾಕ್ ಇಲ್ಲ ಹಾಗೂ ಸರ್ಕಲ್ಗಳಲ್ಲಿ ಸಿಗ್ನಲ್ ದೀಪ ಅಳವಡಿಕೆ ಮಾಡಿಲ್ಲ. ಹೀಗಿದ್ದರೂ ಟೋಲ್ ವಸೂಲಿ ಮಾಡುತ್ತಿದ್ದಾರೆ. ಇದನ್ನು ಕೇಳೀದರೆ, ಟೋಲ್ ಸಿಬ್ಬಂದಿ ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Dec 17, 2023 03:24 PM