Karnataka Budget Session: ಪಾಕ್ ಪರ ಘೋಷಣೆ; ತನಿಖೆ ಜಾರಿಯಲ್ಲಿದೆ 7 ಜನರ ವಿಚಾರಣೆ ನಡೆಸಲಾಗಿದೆ: ಸಿದ್ದರಾಮಯ್ಯ

Karnataka Budget Session: ಪಾಕ್ ಪರ ಘೋಷಣೆ; ತನಿಖೆ ಜಾರಿಯಲ್ಲಿದೆ 7 ಜನರ ವಿಚಾರಣೆ ನಡೆಸಲಾಗಿದೆ: ಸಿದ್ದರಾಮಯ್ಯ
ಅರುಣ್​ ಕುಮಾರ್​ ಬೆಳ್ಳಿ
|

Updated on: Feb 29, 2024 | 11:32 AM

Karnataka Budget Session: ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ, ಈಗಾಗಲೇ 7 ಜನರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಸಾಬೀತಾದರೆ, ಕೂಗಿದವನನ್ನು ಸಂರಕ್ಷಿಸುವ ಪ್ರಶ್ನೆಯೇ ಉದ್ಭವಿಸಲ್ಲ, ಅವನ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಬೆಂಗಳೂರು: ವಿಧಾನ ಸಭಾ ಬಜೆಟ್ ಅಧಿವೇಶನ ಇಂದಿನ ಕಾರ್ಯಕಲಾಪಗಳು ಶುರುವಾಗುತ್ತಿದದ್ದಂತೆಯೇ ಆರ್ ಆಶೋಕ (R Ashoka) ನೇತೃತ್ವದಲ್ಲಿ ವಿರೋಧ ಪಕ್ಷದ ಶಾಸಕರು ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ 48 ಗಂಟೆ ಕಳೆದರೂ ಸರಕಾರ ಒಬ್ಬೇಒಬ್ಬ ವ್ಯಕ್ತಿಯನ್ನು ಬಂಧಿಸಿಲ್ಲ ಅಂತ ಸದನದ ಬಾವಿಗಿಳಿದು (well of the House) ಪ್ರತಿಭಟನೆ ನಡೆಸಿದರು. ಪ್ರಕರಣ ಕುರಿತಂತೆ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಸ್ಪೀಕರ್ ಯುಟಿ ಖಾದರ್ (UT Khader) ಹೇಳಿದರೂ ವಿಪಕ್ಷ ಸದಸ್ಯರು ಕೇಳಲಿಲ್ಲ. ಆಗ ಎದ್ದು ನಿಂತು ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೊದಲಿಗೆ, ಸದಸ್ಯರು ತಮ್ಮ ಸ್ಥಳಗಳಿಗೆ ಹೋಗಿ ಕೂತುಕೊಳ್ಳುವಂತೆ ಮನವಿ ಮಾಡಿದರು. ಮುಂದುವರಿದು ಮಾತಾಡಿದ ಅವರು, ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ, ಈಗಾಗಲೇ 7 ಜನರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಸಾಬೀತಾದರೆ, ಕೂಗಿದವನನ್ನು ಸಂರಕ್ಷಿಸುವ ಪ್ರಶ್ನೆಯೇ ಉದ್ಭವಿಸಲ್ಲ, ಅವನ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ದೇಶಭಕ್ತಿಯ ಪಾಠವನ್ನು ತಾವು ಬೆಜೆಪಿಯಿಂದ ಕಲಿಯಬೇಕಿಲ್ಲ ಎಂದ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರಿಗಿಂತ 100 ಪಟ್ಟು ಹೆಚ್ಚು ದೇಶಭಕ್ತರು ಎಂದು ಹೇಳಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮೇಲೆ ಎಫ್​ಐಆರ್​​​ಗೆ ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ: ಏನದು?

Follow us
ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಜಿತ್ ಪವಾರ್ ಬ್ಯಾಗ್ ಪರಿಶೀಲನೆ
ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಜಿತ್ ಪವಾರ್ ಬ್ಯಾಗ್ ಪರಿಶೀಲನೆ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ
ಉಪ ಚುನಾವಣೆ ಹೊತ್ತಲ್ಲಿ ಚುನಾವಣಾಧಿಕಾರಿಯ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ
ಉಪ ಚುನಾವಣೆ ಹೊತ್ತಲ್ಲಿ ಚುನಾವಣಾಧಿಕಾರಿಯ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ
ಯೋಗೇಶ್ವರ್ ರೈತನ ಮಗ ಮತ್ತು ರೈತ ದೇಶದ ಬೆನ್ನೆಲುಬು: ಶೀಲಾ ಯೋಗೇಶ್ವರ್
ಯೋಗೇಶ್ವರ್ ರೈತನ ಮಗ ಮತ್ತು ರೈತ ದೇಶದ ಬೆನ್ನೆಲುಬು: ಶೀಲಾ ಯೋಗೇಶ್ವರ್
ಜೆಡಿಎಸ್ ಕಾರ್ಯಕರ್ತೆಯೂ ಮತಗಟ್ಟೆ ಬಳಿ ಶಾಲು ಹೊದ್ದು ಓಡಾಡುತ್ತಿದ್ದರು
ಜೆಡಿಎಸ್ ಕಾರ್ಯಕರ್ತೆಯೂ ಮತಗಟ್ಟೆ ಬಳಿ ಶಾಲು ಹೊದ್ದು ಓಡಾಡುತ್ತಿದ್ದರು
‘ಭೈರತಿ ರಣಗಲ್’ ಚಿತ್ರದಲ್ಲಿ ಶ್ರೀಮುರಳಿ ಸರ್​ಪ್ರೈಸ್ ಎಂಟ್ರಿ?
‘ಭೈರತಿ ರಣಗಲ್’ ಚಿತ್ರದಲ್ಲಿ ಶ್ರೀಮುರಳಿ ಸರ್​ಪ್ರೈಸ್ ಎಂಟ್ರಿ?
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ
CCTV Video: ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಸವಾರರು ಪಾರು
CCTV Video: ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಸವಾರರು ಪಾರು
‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ