ಪಶುಸಂಗೋಪನೆ ಇಲಾಖೆಯ ಜಮೀನು ಅಲ್ಪಸಂಖ್ಯಾತರ ಇಲಾಖೆಗೆ; ಸರ್ಕಾರದ ವಿರುದ್ಧ ಕಿಡಿಕಾರಿದ ಆರ್ ಅಶೋಕ
ಈ ನಾಚಿಕೆಗೆಟ್ಟ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಬೆಂಗಳೂರಿನ ಟೌನ್ ಹಾಲ್ ಮತ್ತು ಮೈಸೂರು ರಸ್ತೆ ನಡುವೆ ಪ್ರೈಮ್ ಲೊಕೇಶನಲ್ಲಿರುವ ಮತ್ತು ಪಶು ಸಂಗೋಪನಾ ಇಲಾಖೆಯ ಸುಪರ್ದಿಯಲ್ಲಿದ್ದ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ವರ್ಗಾಯಿಸುವಂತೆ ಆದೇಶ ಹೊರಡಿಸಿದೆ ಎಂದು ಹೇಳಿದ ಅಶೋಕ ಆದೇಶದ ಪ್ರತಿಯನ್ನು ತೋರಿಸಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka), ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕೇವಲ ಅಲ್ಪಸಂಖ್ಯಾತರನ್ನು (minorities) ಓಲೈಸುವ ನಿಟ್ಟಿನಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಹೇಳಿದರು. ಶಾಲೆಗಳ ಹೆಬ್ಬಾಗಿಲಲ್ಲಿ ಬರೆದಿರುವ ಕೈ ಮುಗಿದು ಒಳಗೆ ಬಾ ಅಂತ ಬರೆದ ಉಕ್ತಿಯನ್ನು ತೆಗೆಸಿಹಾಕುತ್ತದೆ ಮತ್ತು ಕುವೆಂಪು (Kuvempu) ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಶಾಲೆಗಳಲ್ಲಿ ಹಾಡೋದು ಬೇಡ ಅಂತ ಆದೇಶ ಹೊರಡಿಸುತ್ತದೆ ಎಂದು ಆಶೋಕ ಹೇಳಿದರು. ಈಗ ಈ ನಾಚಿಕೆಗೆಟ್ಟ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಬೆಂಗಳೂರಿನ ಟೌನ್ ಹಾಲ್ ಮತ್ತು ಮೈಸೂರು ರಸ್ತೆ ನಡುವೆ ಪ್ರೈಮ್ ಲೊಕೇಶನಲ್ಲಿರುವ ಮತ್ತು ಪಶು ಸಂಗೋಪನಾ ಇಲಾಖೆಯ ಸುಪರ್ದಿಯಲ್ಲಿದ್ದ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ವರ್ಗಾಯಿಸುವಂತೆ ಆದೇಶ ಹೊರಡಿಸಿದೆ ಎಂದು ಹೇಳಿ ಆದೇಶದ ಪ್ರತಿಯನ್ನು ತೋರಿಸಿದರು.
ಈ ಜಮೀನಿನ ಮಾರುಕಟ್ಟೆ ಮೌಲ್ಯ ರೂ. 500 ಕೋಟಿ ಎಂದ ಅಶೋಕ ಆ ಭಾಗದಲ್ಲಿ ಅಲ್ಪಸಂಖ್ಯಾತರು ಜಾಸ್ತಿ ಇರೋದ್ರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಸಮಜಾಯಿಷಿಯನ್ನು ಸರ್ಕಾರ ನೀಡಿದೆ, ಆ ಸ್ಥಳದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವೊಂದಿದೆ ಸರ್ಕಾರ ಅದನ್ನೂ ಅಲ್ಪಸಂಖ್ಯಾತರಿಗೆ ನೀಡಲಿ ಎಂದು ಕಿಡಿಕಾರಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಾಕ್ ಪರ ಘೋಷಣೆ: ರಾಷ್ಟ್ರಧ್ವಜ ಹಿಡಿದು ವಿಧಾನಸಭೆಗೆ ಬಂದ ಬಿಜೆಪಿ ನಾಯಕರು, ಸ್ಪೀಕರ್ ಖಾದರ್ ಆಕ್ಷೇಪ, ಅಶೋಕ್ ರೋಷಾವೇಶ