ರನ್ಯಾ ರಾವ್ ಪ್ರಕರಣದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಮಂತ್ರಿಗಳು ಯಾಕೆ ಭಾಗಿಯಾಗಿರಬಾರದು? ಎಸ್ಟಿ ಸೋಮಶೇಖರ್
ರನ್ಯಾ ರಾವ್ ಪ್ರಕರಣದಲ್ಲಿ ಇಬ್ಬರು ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸೋಮಶೇಖರ್, ಹಿಂದಿನ ಬಿಜೆಪಿ ಸರ್ಕಾರದ ಮಂತ್ರಿಗಳೇ ಯಾಕೆ ಶಾಮೀಲಾಗಿರಬಾರದು? ಮೊಬೈಲ್ ಸೀಜ್ ಮಾಡಿದ್ದಾರೆ, ತನಿಖೆ ಮಾಡಿಸಿದರೆ ನಿಜಾಂಶ ಹೊರ ಬಂದೇಬರುತ್ತದೆ ಎಂದು ಹೇಳಿದರು.
ಬೆಂಗಳೂರು, ಮಾರ್ಚ್ 12: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Ranya Rao gold smuggling case) ಬಿಜೆಪಿ ಶಾಸಕರು ಊಹಾಪೋಹಗಳನ್ನು ಮಾಡೋದು ಬಿಟ್ಟು ಕೇಂದ್ರ ಸರ್ಕಾರದ ಜೊತೆ ಮಾತಾಡಿ ತನಿಖೆ ಮಾಡಿಸಲಿ, ಈಡಿ, ಸಿಬಿಐ ಮೊದಲಾದ ತನಿಖಾ ಏಜೆನ್ಸಿಗಳು ಕೇಂದ್ರದ ಅಧೀನದಲ್ಲಿವೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು. ಸದನದಲ್ಲಿ ಬಿಜೆಪಿ ಶಾಸಕರು ವಿಷಯವನ್ನು ಚರ್ಚೆ ಮಾಡಲಿ, ಆದರೆ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿರುವುದರಿಂದ ಅವರು ಕೇಂದ್ರ ಸರ್ಕಾರದ ಜೊತೆ ಮಾತಾಡೋದೇ ಲೇಸು ಎಂದು ಶಾಸಕ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಕರ್ನಾಟಕದ ಪ್ರಭಾವಿ ರಾಜಕಾರಣಿ ಹೆಸರು: ಯಾರವರು?
Published on: Mar 12, 2025 10:32 AM