ಗ್ಯಾರಂಟಿಗಳನ್ನು ಕೇವಲ 100 ದಿನದೊಳಗೆ ಈಡೇರಿಸಿದ ಪ್ರಾಯಶಃ ದೇಶದ ಏಕೈಕ ಸರ್ಕಾರ ನಮ್ಮದು: ಡಿಕೆ ಶಿವಕಮಾರ್

|

Updated on: Sep 08, 2023 | 2:00 PM

ಅಸಲಿಗೆ ಶಕ್ತಿ ಯೋಜನೆ ಅಡಿ ಮಹಿಳೆಯರು ಉಚಿತವಾಗಿ ಪುಣ್ಯ ಕ್ಷೇತ್ರಗಳಿಗೆ ತೆರಳಿ ನಮ್ಮನ್ನು ಹರಸುತ್ತಿರೋದು ಅವರಿಗೆ ಸಹಿಸಲಾಗುತ್ತಿಲ್ಲ, ಗೃಹ ಲಕ್ಷ್ಮಿ ಯೋಜನೆ ಅಡಿ ಗೃಹಣಿಯರಿಗೆ ಮಾಸಿಕ ರೂ. 2,000 ಸಿಗುತ್ತಿರೋದು, ಅನ್ನ ಭಾಗ್ಯ ಯೋಜನೆ ಅಡಿ ಪ್ರತಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ತಲಾ ಐದೈದು ಕೇಜಿ ಅಕ್ಕಿ ಮತ್ತು ಹಣ ಸಿಗುತ್ತಿರೋದು ಹಾಗೂ ಗೃಹ ಜ್ಯೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗುತ್ತಿರೋದು ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು

ಬೆಂಗಳೂರು: ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa), ರಾಜ್ಯ ಸರ್ಕಾರದ ವಿರುದ್ಧ ಜನ ವಿರೋಧಿ ಸರ್ಕಾರ ಅಂತ ಪ್ರತಿಭಟನೆ ಮಾಡುತ್ತಿರುವುದನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಗೇಲಿ ಮಾಡಿದರು. ಮೊದಲು ಅವರು ತಮ್ಮ ಸಂಸದರನ್ನು ಕರೆದೊಯ್ದು ಮಹಾದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ (Mekedatu Project) ಕೇಂದ್ರದಿಂದ ಅನುಮತಿ ಪಡೆದುಕೊಂಡು ಬರಲಿ, ಅಮೇಲೆ ಪ್ರತಿಭಟನೆ ನಡೆಸಲಿ ಎಂದು ಶಿವಕುಮಾರ್ ಹೇಳಿದರು. ನಮ್ಮದು ಜನವಿರೋಧಿ ಸರ್ಕಾರ ಹೇಗಾಗುತ್ತದೆ? ಅಸಲಿಗೆ ಶಕ್ತಿ ಯೋಜನೆ ಅಡಿ ಮಹಿಳೆಯರು ಉಚಿತವಾಗಿ ಪುಣ್ಯ ಕ್ಷೇತ್ರಗಳಿಗೆ ತೆರಳಿ ನಮ್ಮನ್ನು ಹರಸುತ್ತಿರೋದು ಅವರಿಗೆ ಸಹಿಸಲಾಗುತ್ತಿಲ್ಲ, ಗೃಹ ಲಕ್ಷ್ಮಿ ಯೋಜನೆ ಅಡಿ ಗೃಹಣಿಯರಿಗೆ ಮಾಸಿಕ ರೂ. 2,000 ಸಿಗುತ್ತಿರೋದು, ಅನ್ನ ಭಾಗ್ಯ ಯೋಜನೆ ಅಡಿ ಪ್ರತಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ತಲಾ ಐದೈದು ಕೇಜಿ ಅಕ್ಕಿ ಮತ್ತು ಹಣ ಸಿಗುತ್ತಿರೋದು ಹಾಗೂ ಗೃಹ ಜ್ಯೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗುತ್ತಿರೋದು ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು. ಪಾಪ, ಯಡಿಯೂರಪ್ಪ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಂಥದನ್ನೆಲ್ಲ ಮಾಡಬೇಕಾಗುತ್ತದೆ ಎಂದು ಅವರು ವ್ಯಂಗ್ಯವಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ