ದರ್ಶನ್ ನನಗೆ ಕೊಲೆ ಬೆದರಿಕೆ ಹಾಕಿದ್ದರು, ಯುವ ನಿರ್ಮಾಪಕ ಆರೋಪ
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಮೇಲೆ ಯುವ ನಿರ್ಮಾಪಕರೊಬ್ಬರು ಕೊಲೆ ಬೆದರಿಕೆ ಆರೋಪ ಹೊರಿಸಿದ್ದಾರೆ. ಕೆಲ ವರ್ಷದ ಹಿಂದೆ ‘ಶ್ರೀಕೃಷ್ಣ ಪರಮಾತ್ಮ’ ಸಿನಿಮಾ ನಿರ್ಮಾಣ ಮಾಡುವಾಗ ದರ್ಶನ್ ತಮಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕ ಭರತ್ ಹೇಳಿದ್ದಾರೆ.
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan Thoogudeepa) ಆರೋಪಿಯಾಗಿ ಜೈಲು ಸೇರಿದ್ದಾರೆ. ಇದೀಗ ದರ್ಶನ್ರ ಕೆಲವು ಹಳೆಯ ಪ್ರಕರಣಗಳ ಬಗ್ಗೆಯೂ ಚರ್ಚೆ ಆಗುತ್ತಿದೆ. ದರ್ಶನ್ರ ಮಾಜಿ ಆಪ್ತ ಸಹಾಯಕ ಮಲ್ಲಿ ಕಾಣೆಯಾಗಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ‘ಶ್ರೀಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಯುವ ನಿರ್ಮಾಪಕ ಭರತ್ ಎಂಬುವರು ದರ್ಶನ್ ವಿರುದ್ಧ ಆರೋಪಗಳನ್ನು ಮಾಡಿದ್ದು, ನಟ ದರ್ಶನ್ ಕೆಲ ವರ್ಷದ ಹಿಂದೆ ನನಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ. ‘ಶ್ರೀಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾಕ್ಕೆ ದರ್ಶನ್ ಆಪ್ತರೊಬ್ಬರು ನಾಯಕರಾಗಿದ್ದರು, ಹಣಕಾಸಿನ ಸಮಸ್ಯೆಯಿಂದ ಸಿನಿಮಾ ನಿಂತಿತ್ತು, ಆಗ ದರ್ಶನ್ ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಹಲ್ಲೆ ಮಾಡುವ ಪ್ರಯತ್ನವೂ ಆಗಿತ್ತು ಆದರೆ ನಾನು ಬಚಾವಾಗಿದ್ದೆ’ ಎಂದಿದ್ದಾರೆ. ಆ ಬಗ್ಗೆ ದೂರು ಸಹ ದಾಖಲಿಸಿರುವುದಾಗಿಯೂ ಭರತ್ ಹೇಳಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ