ಗೋರಕ್ಷಣೆ ಮಾಡಲು ಹೋದ ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ ಆರೋಪ: ಠಾಣೆಗೆ ಮುತ್ತಿಗೆಗೆ ಯತ್ನ

ಗೋರಕ್ಷಣೆ ಮಾಡಲು ಹೋದ ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ ಆರೋಪ: ಠಾಣೆಗೆ ಮುತ್ತಿಗೆಗೆ ಯತ್ನ

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 14, 2024 | 9:32 PM

ಗೋರಕ್ಷಣೆ ಮಾಡಲು ಹೋದಾಗ ಪ್ರಾಣಿ ರಕ್ಷಕ ಹಾಗೂ ಉರಗ ರಕ್ಷಕ ಮತ್ತು ಬಜರಂಗದಳ ಕಾರ್ಯಕರ್ತ ಸೋಮಶೇಖರ ಚೆನ್ನಶೆಟ್ಟಿ ಎಂಬುವವರ ಮೇಲೆ ಧಾರವಾಡ ನಗರದ ಹಳೇ ಎಪಿಎಂಸಿ ಬಳಿ ಮುಸ್ಲಿಂ ಯುವಕರಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಹೀಗಾಗಿ ಹಲ್ಲೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಧಾರವಾಡ ಉಪನಗರ ಪೊಲೀಸ್‌ ಠಾಣೆಗೆ ಮುತ್ತಿಗೆಗೆ ಯತ್ನಿಸಲಾಗಿದೆ.

ಧಾರವಾಡ, ಜೂನ್​ 14: ಬಜರಂಗದಳ (Bajrang Dal) ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ (Muslim boys) ಹಲ್ಲೆ ಆರೋಪ ಕೇಳಿಬಂದಿದ್ದು, ಹಲ್ಲೆ ಖಂಡಿಸಿ ಧಾರವಾಡ ಉಪನಗರ ಪೊಲೀಸ್‌ ಠಾಣೆಗೆ ಹಿಂದೂಪರ ಸಂಘಟನೆಗಳಿಂದ ಮುತ್ತಿಗೆಗೆ ಯತ್ನಿಸಲಾಗಿದೆ. ಗೋರಕ್ಷಣೆ ಮಾಡಲು ಹೋದಾಗ ಪ್ರಾಣಿ ರಕ್ಷಕ ಹಾಗೂ ಉರಗ ರಕ್ಷಕನೂ ಆಗಿರುವ ಸೋಮಶೇಖರ ಚೆನ್ನಶೆಟ್ಟಿ ಎಂಬುವವರ ಮೇಲೆ ಧಾರವಾಡ ನಗರದ ಹಳೇ ಎಪಿಎಂಸಿ ಬಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಠಾಣೆಯ ಮುಂದೆ ಕುಳಿತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.