ಕಾಲೇಜಿನಲ್ಲೇ ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಕೊಡಿತ್ತಿದ್ದಾರೆ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2024 | 4:46 PM

ಬೆಂಗಳೂರಿನ ಎಸ್​ಎಸ್​ಎಂಆರ್​ವಿ ಪದವಿ ಕಾಲೇಜಿನಲ್ಲೇ ಮಾತ್ರೆ ಸೇವಿಸಿ ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಪ್ರಾಂಶುಪಾಲರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನ ಆರೋಪ ಮಾಡಲಾಗಿದ್ದು, ಅಸ್ವಸ್ಥಗೊಂಡ ಪ್ರಾಧ್ಯಾಪಕಿ ಶಬಾನಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಪ್ರಾಧ್ಯಾಪಕಿ, ಕಳೆದ ಮೂರು ತಿಂಗಳಿನಿಂದ ತುಂಬಾ ಕಿರುಕುಳ ಕೊಡುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರು, ಅಕ್ಟೋಬರ್​ 14: ಕಾಲೇಜಿನಲ್ಲೇ ಮಾತ್ರೆ ಸೇವಿಸಿ ಪ್ರಾಧ್ಯಾಪಕಿ (Professor) ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ಎಸ್​ಎಸ್​ಎಂಆರ್​ವಿ ಪದವಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಮಾತ್ರೆ ಸೇವಿಸಿ ಪ್ರಾಧ್ಯಾಪಕಿ ಶಬಾನಾ ಆತ್ಮಹತ್ಯೆಗೆ ಯತ್ನಿಸಿದ ಪ್ರಾಧ್ಯಾಪಕಿ. ಪ್ರಾಂಶುಪಾಲರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನ ಆರೋಪ ಮಾಡಲಾಗಿದೆ. ಅಸ್ವಸ್ಥಗೊಂಡ ಪ್ರಾಧ್ಯಾಪಕಿ ಶಬಾನಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಸ್ಥಳಕ್ಕೆ ತಿಲಕ್ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಪ್ರಾಧ್ಯಾಪಕಿ ಶಬಾನಾ ಪ್ರತಿಕ್ರಿಯಿಸಿದ್ದು, ನಾನು ಬ್ಲ್ಯಾಕ್​ ಮ್ಯಾಜಿಕ್ ಮಾಡುತ್ತಾಳೆ ಅಂತಾ ಯಾರು ಮಾತಾಡಲ್ಲ. ಕಾಲೇಜಿನಲ್ಲಿ ಅವಿನಾಶ್, ಶಾಂತಿ ಕೃಷ್ಣ, ಸ್ಮಿತಾ, ನರೇಶ್ ಕಳೆದ ಮೂರು ತಿಂಗಳಿನಿಂದ ತುಂಬಾ ಕಿರುಕುಳ ಕೊಡುತ್ತಿದ್ದಾರೆ. ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಾರೆ. ಇದರಿಂದ ನನ್ನ ಪರ್ಸನಲ್ ಲೈಫ್​ಗೂ ಸಮಸ್ಯೆ ಆಗುತ್ತಿದೆ. ಅದಕ್ಕೆ ತುಂಬಾ ಬೇಜಾರ್​ ಆಗಿ ಸಾಯುವ ನಿರ್ಧಾರಕ್ಕೆ ಬಂದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.