Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ನೋಡಿ... ನಾಗಪ್ಪನ ಮೇಲೆ ಗೋ ಮಾತೆಯ ಮಮಕಾರ! ಭಯ ಹುಟ್ಟಿಸುತ್ತಿದೆ

ವಿಡಿಯೋ ನೋಡಿ… ನಾಗಪ್ಪನ ಮೇಲೆ ಗೋ ಮಾತೆಯ ಮಮಕಾರ! ಭಯ ಹುಟ್ಟಿಸುತ್ತಿದೆ

ಸಾಧು ಶ್ರೀನಾಥ್​
|

Updated on: Oct 14, 2024 | 3:35 PM

ಅಪರೂಪದ ಪ್ರಸಂಗದಲ್ಲಿ ಸುವಿಶಾಲ ತೋಟದಲ್ಲಿ ಸುಗ್ರಾಸ ಹುಲ್ಲು ಮೇಯುತ್ತಿದ್ದ ಹಸುವಿನ ಎದುರು ನಾಗರ ಹಾವು ಹೆಡೆಯೆತ್ತಿ ಲಾಸ್ಯವಾಡಿದೆ. ಆದರೆ ಹಸು ಮಾತ್ರ ಬೇಷರತ್ತಾಗಿ ಆ ಹೆಡೆಯೆತ್ತಿದ ನಾಗಪ್ಪನ ಮೇಲೆ ಪ್ರೀತಿಯ ಮಳೆ ಸುರಿಸಿದೆ. ಹಾವಿನ ಪ್ರತಿಕ್ರಿಯೆಯೂ ಅಪರೂಪದ್ದಾಗಿದೆ. ವಿಡಿಯೋ ವೈರಲ್ ಆಗಿದೆ! ಈ ವೈರಲ್ ವೀಡಿಯೊ ಸ್ವಭಾಗಳಲ್ಲಿ ಎರಡು ಅಜಗಜಾಂತರದ ಜೀವಿಗಳ ನಡುವಿನ ಅನನ್ಯ ಬಂಧವನ್ನು ಚಿತ್ರಿಸಿದೆ.

ಅಪರೂಪದ ಪ್ರಸಂಗದಲ್ಲಿ ಸುವಿಶಾಲ ತೋಟದಲ್ಲಿ ಸುಗ್ರಾಸ ಹುಲ್ಲು ಮೇಯುತ್ತಿದ್ದ ಹಸುವಿನ ಎದುರು ನಾಗರ ಹಾವು ಹೆಡೆಯೆತ್ತಿ ಲಾಸ್ಯವಾಡಿದೆ. ಆದರೆ ಹಸು ಮಾತ್ರ ಬೇಷರತ್ತಾಗಿ ಆ ಹೆಡೆಯೆತ್ತಿದ ನಾಗಪ್ಪನ ಮೇಲೆ ಪ್ರೀತಿಯ ಮಳೆ ಸುರಿಸಿದೆ. ಹಾವಿನ ಪ್ರತಿಕ್ರಿಯೆಯೂ ಅಪರೂಪದ್ದಾಗಿದೆ. ವಿಡಿಯೋ ವೈರಲ್ ಆಗಿದೆ! ನಾಗರ ಹಾವುಗಳನ್ನು ವಿಷಕಾರಿ ಹಾವು ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಪ್ರಾಣಿಗಳು ಅವುಗಳಿಂದ ದೂರವಿರುತ್ತವೆ. ನಾಗರ ಹಾವುಗಳು ಸಹ ಬಹಳ ಜಾಗರೂಕವಾಗಿರುತ್ತವೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿರಳವಾದ ವಿಡಿಯೋವೊಂದು ವೈರಲ್ ಆಗಿದೆ. ಹಸು ಮತ್ತು ನಾಗರ ಹಾವಿನ ಅಪರೂಪದ ಬಾಂಧವ್ಯದ ದೃಶ್ಯವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಕ್ಟೋಬರ್ 10, 2024 ರಂದು ‘ಮಾಸ್ಸಿಮೊ’ ಎಕ್ಸ್ ಖಾತೆಯಿಂದ (ಹಿಂದಿನ ಟ್ವಿಟರ್) ಅಪ್‌ಲೋಡ್ ಮಾಡಿದ ವೀಡಿಯೊ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈ ವಿಡಿಯೋದಲ್ಲಿ ಹಸು ನಾಗರಹಾವನ್ನು ಪದೇ ಪದೇ ನೆಕ್ಕುವ ಮೂಲಕ ತನ್ನ ಪ್ರೀತಿಯನ್ನು ತೋರಿಸಿದೆ. ಹಾಗೆಯೇ ಸದಾ ಕೋಪಗೊಂಡು ಉದ್ರೇಕಗೊಳ್ಳುವ ಹಾವು ತನ್ನ ಬೇಸಿಕ್​ ಸ್ವಭಾವವನ್ನು ಪಕ್ಕಕ್ಕಿಟ್ಟು ಹಸುವಿನ ಮೇಲೆ ದಾಳಿ ಮಾಡದೆ ಶಾಂತವಾಗಿ ವರ್ತಿಸಿದೆ. ಈ ದೃಶ್ಯ ನೋಡಿ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. Also Read: Tirupati Rains – ವಿಡಿಯೋ: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ದೇವಸ್ಥಾನದ ಸುತ್ತಮುತ್ತ ಪ್ರವಾಹ ಪರಿಸ್ಥಿತಿ! ಕ್ಯಾಮೆರಾದಲ್ಲಿ ಸೆರೆಯಾದ ಈ ಅಪರೂಪದ ಕ್ಷಣ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ಅದು ವೈರಲ್‌ ವೀಡಿಯೋ ಆಗಿದೆ. ಹಸು ಮತ್ತು ಹಾವಿನ ನಡುವಿನ ಈ ಭಾವನಾತ್ಮಕ ನಂಟು ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ನೆಟಿಜನ್ ಬರೆದುಕೊಂಡಿದ್ದಾರೆ,...