Viral News : ಶ್ರೀರಾಮನು ಶ್ರೀಲಂಕಾದಿಂದ ಅಯೋಧ್ಯೆಗೆ ತೆರಳಲು ತೆಗೆದುಕೊಂಡದ್ದು 21 ದಿನಗಳಂತೆ, ವೈರಲ್ ಆಯ್ತು ಟ್ವೀಟ್
ರಾಮ ಮತ್ತು ರಾಮಾಯಣದ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ. ಮಕ್ಕಳಿರುವಾಗಲೇ ಶ್ರೀರಾಮ ಹಾಗೂ ರಾಮಾಯಣದ ಕಥೆಗಳನ್ನು ಕೇಳಿಯೇ ಬೆಳೆದಿರುತ್ತೇವೆ. ಆದರೆ ಇದೀಗ ಶ್ರೀರಾಮನಿಗೆ ಸಂಬಂಧಪಟ್ಟ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶ್ರೀಲಂಕಾದಿಂದ ಶ್ರೀರಾಮನು ಅಯೋಧ್ಯೆಗೆ ತೆರಳಲು 21 ದಿನಗಳ ಕಾಲ ಪ್ರಯಾಣ ಬೆಳೆಸಿದ್ದಾನೆ ಎಂದು ಗೂಗಲ್ ಮ್ಯಾಪ್ ಹೇಳುತ್ತಿದೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಇದು ನಿಜಾನಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ರಾಮಾಯಣವು ಹಿಂದೂಗಳ ಪ್ರಮುಖ ಧರ್ಮಗ್ರಂಥವಾಗಿದ್ದು, ಇದರಲ್ಲಿ ಬರುವ ಕಥೆಗಳ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇದೆ. ಶ್ರೀರಾಮ ಹಾಗೂ ರಾಮಾಯಣವು ಭಕ್ತರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಈಗಾಗಲೇ ಶ್ರೀರಾಮನು ಮರ್ಯಾದಾ ಪುರುಷೋತ್ತಮ ಎನ್ನುವ ಬಿರುದನ್ನು ಪಡೆದುಕೊಂಡಿದ್ದು, ಆತನನ್ನು ಆದರ್ಶವಾಗಿ ಅನೇಕರು ತೆಗೆದುಕೊಂಡಿದ್ದಾರೆ. ಆದರೆ ಇದೀಗ ಶ್ರೀಲಂಕಾದಿಂದ ಶ್ರೀರಾಮನು ಅಯೋಧ್ಯೆಗೆ ತೆರಳಲು 21 ದಿನಗಳ ಕಾಲ ಪ್ರಯಾಣ ಬೆಳೆಸಿದ್ದಾನೆ ಎನ್ನುವ ಟ್ವೀಟ್ ವೊಂದು ವೈರಲ್ ಆಗಿದೆ.
ಶ್ರೀಲಂಕಾದಿಂದ ಅಯೋಧ್ಯೆಗೆ ತೆರಳಲು 21 ದಿನಗಳು ಮತ್ತು 10 ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಗೂಗಲ್ ಮ್ಯಾಪ್ ಹೇಳುತ್ತಿದೆಯಂತೆ. ಮುಕುಲ್ ದೇಖಾನೆ ಹೆಸರಿನ ಖಾತೆಯಲ್ಲಿ ಗೂಗಲ್ ಮ್ಯಾಪ್ ಸ್ಕ್ರೀನ್ ಶಾರ್ಟ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದೊಂದಿಗೆ ‘ದಸರಾ ನಂತರ 21 ದಿನಗಳ ನಂತರ ದೀಪಾವಳಿಯನ್ನು ಏಕೆ ಆಚರಿಸಲಾಗುತ್ತದೆ? ಶ್ರೀರಾಮ ಚಂದ್ರನು ಶ್ರೀಲಂಕಾದಿಂದ ಅಯೋಧ್ಯೆಗೆ ನಡೆಯಲು 21 ದಿನಗಳನ್ನು ತೆಗೆದುಕೊಂಡಿದ್ದು ನಿಜಾನ? ಅದನ್ನು ಗೂಗಲ್ ಮ್ಯಾಪ್‌ನಲ್ಲಿ ಪರಿಶೀಲಿಸಿದನ್ನು ಕಂಡು ನನಗೆ ಆಘಾತವಾಯಿತು. ಲಂಕೆಯಿಂದ ಅಯೋಧ್ಯೆಗೆ ವಾಪಸ್ಸಾಗಲು 21 ದಿನಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ನಾನು ಮೂಕನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಏನ್ ತಲೆ ಗುರು ಇವನದ್ದು, ಹೀಗೂ ಬಟ್ಟೆ ಹೊಲಿಯಬಹುದಂತೆ
ವೈರಲ್ ಎಕ್ಸ್ ಪೋಸ್ಟ್;
Why is Diwali celebrated 21 days after Dussehra.
They told me that it took Shree Ram ji 21 days to walk from Srilanka to Ayodhya. I then checked it in Google maps and I was just shocked to see it does take 21 days to get back.
So Shree Ram ji did exist and he knew the… pic.twitter.com/d2uedGp2d6
— Mukul Dekhane (@dekhane_mukul) October 12, 2024
ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, ‘ಇದು ದಸರಾ ಮತ್ತು ದೀಪಾವಳಿ ನಡುವಿನ 21 ದಿನಗಳ ಅಂತರಕ್ಕೆ ಹೊಂದಿಕೆಯಾಗುತ್ತಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ದೀಪಾವಳಿ ಮತ್ತು ದಸರಾದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ ಶ್ರೀರಾಮನ ಮಹಾಕಾವ್ಯದ ಪ್ರಯಾಣವನ್ನು ಅತೀಯಾಗಿ ಕೆಳ ಮಟ್ಟದಲ್ಲಿ ತೋರಿಸಲಾಗಿದೆ ಎಂದು ಟೀಕಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ