Viral Video: ಆಸ್ತಿ ವಿವಾದ: ಕಾರು ಗುದ್ದಿಸಿ ಸಹೋದರನ ಕುಟುಂಬದವರನ್ನು ಕೊಲ್ಲಲು ಯತ್ನ

Edited By:

Updated on: Jul 17, 2025 | 11:22 AM

ಮನುಷ್ಯ, ಆಸ್ತಿ, ಹಣದ ವಿಚಾರಕ್ಕೆ ಬಂದರೆ ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ ಎಂಬುದಕ್ಕೆ ಇದೇ ನಿದರ್ಶನ. ಆಸ್ತಿ ವಿವಾದ ತಾರಕ್ಕೇರಿ ವ್ಯಕ್ತಿಯೊಬ್ಬ ಕಾರು ಗುದ್ದಿಸಿ ಸಹೋದರನ ಕುಟುಂಬದವರೆಲ್ಲರನ್ನೂ ಹತ್ಯೆ ಮಾಡಲು ಪ್ರಯತ್ನಿಸಿರುವ ಘಟನೆ ಪಂಜಾಬ್​ನ ಮೊಗಾದಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ವಿಡಿಯೋ ಸೆರೆಯಾಗಿದೆ.ಒಂದು ತಿಂಗಳ ಹಿಂದಿನವರೆಗೂ ತಮ್ಮ ಕಿರಿಯ ಮಗ ದಿಲ್‌ಬಾಗ್ ಸಿಂಗ್ ಜೊತೆ ವಾಸಿಸುತ್ತಿದ್ದ ಸುರ್ಜಿತ್ ಸಿಂಗ್ ಮತ್ತು ಅವರ ಪತ್ನಿಯ ವಿಚಾರವಾಗಿ ಗದ್ದಲ ಶುರುವಾಗಿತ್ತು.

ಪಂಜಾಬ್, ಜುಲೈ 17: ಮನುಷ್ಯ, ಆಸ್ತಿ, ಹಣದ ವಿಚಾರಕ್ಕೆ ಬಂದರೆ ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ ಎಂಬುದಕ್ಕೆ ಇದೇ ನಿದರ್ಶನ. ಆಸ್ತಿ ವಿವಾದ ತಾರಕ್ಕೇರಿ ವ್ಯಕ್ತಿಯೊಬ್ಬ ಕಾರು ಗುದ್ದಿಸಿ ಸಹೋದರನ ಕುಟುಂಬದವರೆಲ್ಲರನ್ನೂ ಹತ್ಯೆ ಮಾಡಲು ಪ್ರಯತ್ನಿಸಿರುವ ಘಟನೆ ಪಂಜಾಬ್​ನ ಮೊಗಾದಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ವಿಡಿಯೋ ಸೆರೆಯಾಗಿದೆ.ಒಂದು ತಿಂಗಳ ಹಿಂದಿನವರೆಗೂ ತಮ್ಮ ಕಿರಿಯ ಮಗ ದಿಲ್‌ಬಾಗ್ ಸಿಂಗ್ ಜೊತೆ ವಾಸಿಸುತ್ತಿದ್ದ ಸುರ್ಜಿತ್ ಸಿಂಗ್ ಮತ್ತು ಅವರ ಪತ್ನಿಯ ವಿಚಾರವಾಗಿ ಗದ್ದಲ ಶುರುವಾಗಿತ್ತು.

ಆಸ್ತಿಯ ಬಗ್ಗೆ ಭಿನ್ನಾಭಿಪ್ರಾಯದ ನಂತರ, ದಿಲ್‌ಬಾಗ್ ಸಿಂಗ್ ತನ್ನ ಹೆತ್ತವರನ್ನು ಮನೆಯಿಂದ ಹೊರಹಾಕಿದ್ದ.ವೃದ್ಧ ದಂಪತಿಗಳು ಧರ್ಮಕೋಟ್‌ನ ಗಟ್ಟಿ ಜಟ್ಟಾ ಗ್ರಾಮದಲ್ಲಿ ವಾಸಿಸುವ ತಮ್ಮ ಹಿರಿಯ ಮಗ ಬಲ್ವಿಂದರ್ ಸಿಂಗ್ ಮನೆಗೆ ಹೋಗಿದ್ದರು. ಆಗ ಇಬ್ಬರು ಸಹೋದರರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು.

ಜುಲೈ 14 ರ ಸಂಜೆ, ಬಲ್ವಿಂದರ್ ಸಿಂಗ್, ಅವರ ಪತ್ನಿ ಮತ್ತು ಮಗಳು ತಮ್ಮ ಮನೆಯ ಗೇಟ್ ಬಳಿ ನಿಂತಿದ್ದಾಗ, ದಿಲ್ಬಾಗ್ ಸಿಂಗ್ ಉದ್ದೇಶಪೂರ್ವಕವಾಗಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ದಿಲ್ಬಾಗ್ ಸಿಂಗ್ ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಣ್ಣ ಮತ್ತು ಕುಟುಂಬ ಮನೆಯ ಹೊರಗೆ ನಿಂತಿರುವುದನ್ನು ನೋಡಿ ವಾಹನ ನಿಲ್ಲಿಸಿ, ಪತ್ನಿಗೆ ಹೊರಬರಲು ಸೂಚಿಸಿ, ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jul 17, 2025 07:51 AM