ಕುಗ್ರಾಮಗಳಿಗೂ ರಸ್ತೆ ಸಂಪರ್ಕ ಕಲ್ಪಿಸುವುದು ತನ್ನ ಸಂಕಲ್ಪ ಎಂದರು ಜಗ್ಗೇಶ್
ಕುಗ್ರಾಮಗಳಿಗೂ ರಸ್ತೆ ಸೌರ್ಯ ಕಲ್ಪಿಸಬೇಕು ಎಂದು ಹೇಳುವ ಅವರು ಗ್ರಾಮಗಳ ಅಭಿವೃದ್ಧಿ ತಮ್ಮ ಆದ್ಯತೆಯಾಗಿರುತ್ತದೆ ಎನ್ನುತ್ತಾರೆ.
ಬೆಂಗಳೂರು: ಜಗ್ಗೇಶ್ ಖುಷಿಯಿಂದ ಬೀಗುತ್ತಿದ್ದಾರೆ ಮಾರಾಯ್ರೇ. ತನ್ನ ಕಾರ್ಯವ್ಯಾಪ್ತಿ ಕರ್ನಾಟಕಕ್ಕೆ (Karnataka) ಮಾತ್ರ ಸೀಮಿತಗೊಂಡಿರುತ್ತದೆ ಅಂದುಕೊಂಡಿದ್ದ ಅವರಿಗೆ ರಾಜಕಾರಣ ಅದನ್ನು ರಾಷ್ಟ್ರಮಟ್ಟಕ್ಕೂ ವಿಸ್ತರಿಸಿರುವುದು ಬಹಳ ಸಂತೋಷವನ್ನುಂಟು ಮಾಡಿದೆ. ಇದೆಲ್ಲ ರಾಯರ ಕೃಪೆಯಿಂದ ಸಾಧ್ಯವಾಗಿದೆ ಮತ್ತು ಕನ್ನಡಿಗರು ತಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಕೃತಜ್ಞನಾಗಿದ್ದೇನೆ (grateful) ಅಂತ ಅವರು ಹೇಳುತ್ತಾರೆ. ಪಕ್ಷದ ವರಿಷ್ಠರು (party leaders) ತಮ್ಮ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರೆಸಿದ್ದಾರೆ, ಅವರಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದ ಹಾಗೆ, ಯಾವತ್ತೂ ಮೈಮರೆಯದೆ ಕೆಲಸ ಮಾಡುವ ಸಂಕಲ್ಪ ಮಾಡಿಕೊಂಡಿದ್ದೇನೆ ಎಂದು ಅವರು ಹೇಳುತ್ತಾರೆ. ಕುಗ್ರಾಮಗಳಿಗೂ ರಸ್ತೆ ಸೌರ್ಯ ಕಲ್ಪಿಸಬೇಕು ಎಂದು ಹೇಳುವ ಅವರು ಗ್ರಾಮಗಳ ಅಭಿವೃದ್ಧಿ ತಮ್ಮ ಆದ್ಯತೆಯಾಗಿರುತ್ತದೆ ಎನ್ನುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos