Loading video

PSL 2025: ಮೊದಲ ಪಂದ್ಯದಲ್ಲೇ ಸೊನ್ನೆ ಸುತ್ತಿದ ನಾಯಕ ಬಾಬರ್; ವಿಡಿಯೋ ನೋಡಿ

|

Updated on: Apr 12, 2025 | 7:50 PM

Babar Azam's Disastrous PSL Debut: ಪಾಕಿಸ್ತಾನ ಸೂಪರ್ ಲೀಗ್ನ ಮೊದಲ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಆಝಂ ಅವರು ಕೇವಲ ಎರಡು ಎಸೆತಗಳಲ್ಲಿ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ, ಮೊಹಮ್ಮದ್ ಅಮೀರ್ ಅವರು ಬಾಬರ್ ಅವರನ್ನು ಔಟ್ ಮಾಡಿದರು. 217 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ.

ಪಾಕಿಸ್ತಾನ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ ಬಾಬರ್ ಆಝಂ ದಯನೀಯವಾಗಿ ವಿಫಲರಾದರು. ಆರಂಭಿಕನಾಗಿ ಕಣಕ್ಕಿಳಿದಿದ್ದ ಬಾಬರ್ ಕೇವಲ 2 ಎಸೆತಗಳಲ್ಲಿ ಯಾವುದೇ ರನ್ ಗಳಿಸಿದೆ ಪೆವಿಲಿಯನ್‌ಗೆ ಮರಳಿದರು. ಪೇಶಾವರ್ ಝಲ್ಮಿ ತಂಡದ ನಾಯಕನಾಗಿರುವ ಬಾಬರ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಕ್ವೆಟ್ಟಾ ಗ್ಲಾಡಿಯೇಟರ್ಸ್ ನೀಡಿದ 217 ರನ್‌ಗಳ ಗುರಿ ಬೆನ್ನಟ್ಟಿದ ಪೇಶಾವರ್ ಝಲ್ಮಿ ತಂಡದ ಪರ ಆರಂಭಿಕನಾಗಿ ಬಂದಿದ್ದ ಬಾಬರ್ ಆಝಂ ಮೊದಲ ಓವರ್‌ನಲ್ಲಿಯೇ ಔಟಾದರು. ತನ್ನ ಎರಡನೇ ಎಸೆತದಲ್ಲೇ ಬಾಬರ್, ಕವರ್ ಫೀಲ್ಡರ್‌ಗೆ ನೇರ ಮತ್ತು ಸುಲಭವಾದ ಕ್ಯಾಚ್ ನೀಡಿದರು. ಪಾಕಿಸ್ತಾನದ ಮಾಜಿ ಎಡಗೈ ವೇಗಿ ಮೊಹಮ್ಮದ್ ಅಮೀರ್, ಬಾಬರ್ ಆಝಂ ಅವರ ವಿಕೆಟ್ ಪಡೆದರು.