ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 16, 2024 | 9:44 PM

ಹಾಸನ ಜಿಲ್ಲೆಯಲ್ಲಿ 3925 ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಯಾಗಿವೆ. ಇದರಿಂದಾಗಿ ಅನೇಕ ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ರೇಷನ್ ಮತ್ತು 2000 ರೂಪಾಯಿ ನೆರವು ಕಳೆದುಕೊಂಡಿರುವ ಬಗ್ಗೆ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ಹಾಸನ, ನವೆಂಬರ್​ 16: ಹಾಸನ ಜಿಲ್ಲೆಯಲ್ಲಿ 3 ಸಾವಿರದ 925 ಬಿಪಿಎಲ್ ಕಾರ್ಡ್​ಗಳು (bpl cards) ಎಪಿಎಲ್ ಕಾರ್ಡ್​ಗಳಾಗಿ ಬದಲಾವಣೆಯಾಗಿವೆ. ಹಲವರ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಮತ್ತೊಂದಷ್ಟು ಜನರದ್ದು ಎಪಿಎಲ್ ಆಗಿ ಮಾರ್ಪಟ್ಟಿರೋದಕ್ಕೆ ಹಾಸನ ಜನತೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೂಲಿ ಮಾಡೋರು ಎಲ್ಲಿ ಹೋಗೋದು ಅಂತಾ ಪ್ರಶ್ನಿಸಿದ್ದಾರೆ. ರೇಷನ್ ಅಷ್ಟೇ ಅಲ್ಲ, 2 ಸಾವಿರ ರೂಪಾಯಿ ಕೂಡ ಬರ್ತಿಲ್ಲ ಅಂತಾ ಮಹಿಳೆಯೊಬ್ಬರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 16, 2024 09:43 PM