ಕರ್ನಾಟಕದಲ್ಲಿ 10 ಸಾವಿರ ಬಿಪಿಎಲ್ ಕಾರ್ಡ್​ಗಳು ರದ್ದು: ಸರ್ಕಾರಿ ಸೌಕರ್ಯಗಳಿಗೂ ಬ್ರೇಕ್​?

ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ಕುರಿತು ಆತಂಕ ಹೆಚ್ಚಾಗಿದೆ. ಐಟಿ ಹೊಂದಿರುವ ಬಿಪಿಎಲ್ ಫಲಾನುಭವಿಗಳ ಕಾರ್ಡ್‌ಗಳು ರದ್ದಾಗಿವೆ. ಎಪಿಎಲ್ ಕಾರ್ಡ್ ರದ್ದು ಸುದ್ದಿಯನ್ನು ಆಹಾರ ನಾಗರಿಕ ಸರಬರಾಜು ಇಲಾಖೆ ನಿರಾಕರಿಸಿದೆ. ಬಿಪಿಎಲ್ ರದ್ದತಿಯಿಂದ ಆಯುಷ್ಮಾನ್, ವಿದ್ಯಾರ್ಥಿ ವೇತನ ಮುಂತಾದ ಸೌಲಭ್ಯಗಳು ಕಡಿತಗೊಳ್ಳುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ 10 ಸಾವಿರ ಬಿಪಿಎಲ್ ಕಾರ್ಡ್​ಗಳು ರದ್ದು: ಸರ್ಕಾರಿ ಸೌಕರ್ಯಗಳಿಗೂ ಬ್ರೇಕ್​?
ಕರ್ನಾಟಕದಲ್ಲಿ 10 ಸಾವಿರ ಬಿಪಿಎಲ್ ಕಾರ್ಡ್​ಗಳು ರದ್ದು: ಸರ್ಕಾರಿ ಸೌಕರ್ಯಗಳಿಗೂ ಬ್ರೇಕ್​?
Follow us
Poornima Agali Nagaraj
| Updated By: ಗಂಗಾಧರ​ ಬ. ಸಾಬೋಜಿ

Updated on: Nov 16, 2024 | 9:13 PM

ಬೆಂಗಳೂರು, ನವೆಂಬರ್​ 16: ಈ ಹಿಂದೆ ಬಿಪಿಎಲ್​ಗಳಲ್ಲಿ (BPL cards) ಐಟಿ ಇದ್ದ ಫಲಾನುಭವಿಗಳ ಕಾರ್ಡ್​ಗಳು ರದ್ದಾಗಿದ್ದವು. ಈ ಮಧ್ಯೆ ಎಪಿಎಲ್​ ಕಾರ್ಡ್​ಗಳು ಕೂಡ ರದ್ದಾಗಿವೆ ಅಂತ ಸುದ್ದಿ ಹರಿದಾಡಿತ್ತು. ಇದೀಗ ಆ ಸುದ್ದಿಗೆ ಆಹಾರ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆ ಕುರಿತ ಒಂದು ಸಂಪೂರ್ಣ ವರದಿ ಇಲ್ಲಿದೆ ಮುಂದೆ ಓದಿ.

ಬಿಪಿಎಲ್ ಫಲಾನುಭವಿಗಳಿಗೆ ಶಾಕ್

ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಒಂದಿಲ್ಲೊಂದು ಸಮಸ್ಯೆಗಳು ಬರುತ್ತಿದೆ. ಕಳೆದ ಎರೆಡು ತಿಂಗಳು ಹಿಂದೆ ಗೃಹಲಕ್ಷ್ಮಿ ಯೋಜನೆಯಲ್ಲಿ 16 ಸಾವಿರ ಜಿಎಸ್​ಟಿ ಹಾಗೂ ಐಟಿ ಇದ್ದ ಕಾರ್ಡ್​ಗಳನ್ನ ರದ್ದು ಮಾಡಿ ಗೃಹಿಣಿಯರಿಗೆ ಮಹಿಳಾ ಅಭಿವೃದ್ಧಿ ಇಲಾಖೆ ಶಾಕ್ ಕೊಟ್ಟಿತ್ತು.‌ ಇದರ ಬೆನ್ನಲ್ಲೇ ಅನ್ನಭಾಗ್ಯ ಯೋಜನೆಯಲ್ಲಿ ಇದೀಗ ಬಿಪಿಎಲ್ ಕಾರ್ಡ್​ನಲ್ಲಿ 10 ಸಾವಿರ ಫಲಾನುಭವಿಗಳ ಕಾರ್ಡ್​ಗಳನ್ನ ರದ್ದು ಮಾಡಿದ್ದು, ಈ ಕಾರ್ಡ್​ಗಳ ಫಲಾನುಭವಿಗಳು ಪಡೆಯುತ್ತಿದ್ದ ಸೌಕರ್ಯಗಳನ್ನ ರದ್ದು ಮಾಡಲಾಗಿದೆ.

ಇದನ್ನೂ ಓದಿ: ಪಡಿತರ ಚೀಟಿ ರದ್ದು ವಿಚಾರ: ಒಂದೇ ಒಂದು ಎಪಿಎಲ್​ ಕಾರ್ಡ್ ರದ್ದಾಗಿಲ್ಲ, ಸಚಿವ ಮುನಿಯಪ್ಪ

ಹೌದು.. ಬಿಪಿಎಲ್ ಕಾರ್ಡ್​ಗಳಲ್ಲಿ ಇದ್ದವರಿಗೆ ಆಯುಷ್ಮಾನ್, ವಿದ್ಯಾರ್ಥಿ ವೇತನ, ಸಿಎಂ‌ ಪರಿಹಾರ ನಿಧಿ, ನರೇಗಾ ಯೋಜನೆ ಸೇರಿದಂತೆ ವ್ಯಯಕ್ತಿಕ ಕಾಮಾಗಾರಿಯನ್ನ ಕೈಗೊಳ್ಳುವಂತಹ ಸೌಕರ್ಯಗಳು ಸಿಗುತ್ತಿದ್ದವು. ಆದರೆ ಈ ಸೌಕರ್ಯಗಳನ್ನು ಇದೀಗ ರದ್ದಾಗುವ ಸಾಧ್ಯತೆ ಇದ್ದು, ಫಲಾನುಭವಿಗಳಿಗೆ ಸದ್ಯ ಶಾಕ್ ಉಂಟಾಗಿದೆ.

ಇನ್ನು ಆಹಾರ ನಾಗರಿಕ ಸರಬರಾಜು ಇಲಾಖೆ ಎಪಿಎಲ್ ಕಾರ್ಡ್​ಗಳನ್ನ ಕೂಡ ರದ್ದು ಮಾಡಲಾಗಿದೆ ಅಂತ ಸುದ್ದಿಹರಿದಾಡಿತ್ತು. ಈ ಕುರಿತಾಗಿ ಆಹಾರ ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ ಕೊಟ್ಟಿದೆ. ನಿರ್ದೆಶನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯೂ ಯಾವುದೇ ಎಪಿಎಲ್ ಕಾರ್ಡುಗಳ ರದ್ದತಿಗೆ ಯಾವುದೇ ಸೂಚನೆ ನೀಡಿಲ್ಲ. ಯಾವುದೇ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿಲ್ಲ ಎಂದಿದ್ದಾರೆ.

ಕೆಲವು ದಿನಪತ್ರಿಕೆಗಳಲ್ಲಿ ಇ-ಕೆವೈಸಿ ನೋಂದಣಿ ಮಾಡಿಕೊಳ್ಳದ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ. ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ 2 ರಂದು 25,13,798 ಎಪಿಎಲ್ ಕಾರ್ಡುಗಳಿದ್ದವು. ಇಂದು ನವೆಂಬರ್ 16 ರಂದು 25,62,566 ಕಾರ್ಡುಗಳಿವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಕಾರ್ಯ ಕೈಗೊಂಡ ಪರಿಣಾಮ, ಕೆಲವು ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಪರಿವರ್ತಿಸಿರುವುದರಿಂದ 48,768 ಕಾರ್ಡುಗಳು ಹೆಚ್ಚಳವಾಗಿವೆ. ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಸುದ್ದಿ ಸತ್ಯ ಸಂಗತಿಯಲ್ಲ‌ ಇಲಾಖೆ ಪ್ರಕಟಣೆ ತಿಳಿಸಿದೆ.

ಆಹಾರ ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಹೇಳಿದ್ದಿಷ್ಟು 

ಇನ್ನು, ಈ ಕುರಿತಾಗಿ ಟಿವಿ9 ಗೆ ಮಾಹಿತಿ ನೀಡಿದ ಆಹಾರ ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಕುಮಾರ್, ಐಟಿ ಇದ್ದಂತಹ ಕಾರ್ಡ್​ಗಳನ್ನ ಸದ್ಯ ರದ್ದು ಮಾಡಲಾಗಿದೆ. ಬಿಪಿಎಲ್ ಕಾರ್ಡ್​ಗಳಿಗೆ ಇದ್ದಂತಹ ಸೌಲಭ್ಯಗಳನ್ನ ಕಡಿತಗೊಳಿಸಲಾಗುತ್ತದೆ. ಎಪಿಎಲ್ ಕಾರ್ಡ್​ಗಳಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಇರೋದಿಲ್ಲ. ಸದ್ಯ ರದ್ದಾಗಿರುವ ಕಾರ್ಡ್​ಗಳಿಗೆ ಆಯುಷ್ಮನ್ ಯೋಜನೆ, ವಿದ್ಯಾರ್ಥಿ ವೇತನ, ಸಿಎಂ ಪರಿಹಾರ ನಿಧಿ, ನರೇಗಾ ಯೋಜನೆಗಳು ರದ್ದಾಗುವ ಸಾಧ್ಯತೆ ಇದೆ. ಅಲ್ಲದೇ ಬಿಪಿಎಲ್ ಕಾರ್ಡ್​ದಾರರು ವೈಯಕ್ತಿಕ ಕಾಮಗಾರಿ ಕಾಮಾಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಜೊತೆಗೆ ಐಟಿಯಿಂದ ರದ್ದಾಗಿರುವ ಕುರಿತು ಸೋಮವಾರ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸದ್ದಿಲ್ಲದೆ ರದ್ದಾಗುತ್ತಿವೆ ಪಡಿತರ ಚೀಟಿ: ಬಿಪಿಎಲ್​, ಎಪಿಎಲ್​ ಕಾರ್ಡ್​ದಾರರಿಗೆ ಬಿಗ್​ ಶಾಕ್​

ಬಿಪಿಎಲ್ ಕಾರ್ಡ್​ನಲ್ಲಿ ಸದ್ಯ ಪರಿಷ್ಕರಣೆ ನಡೆಯುತ್ತಿದ್ದು, ಐಟಿ ಕಾರ್ಡ್​ಗಳನ್ನ ರದ್ದು ಮಾಡಲಾಗಿದೆ. ಬಿಪಿಎಲ್​ಗೆ ಅರ್ಹತೆ ಇಲ್ಲದೇ ಇರುವ ಫಲಾನುಭವಿಗಳು ಎಪಿಎಲ್​ಗೆ ಬದಲಾವಣೆ ಮಾಡುತ್ತಿದ್ದು, ಸದ್ಯ ಫಲಾನುಭವಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ