ರೇಷನ್ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ಹಾಸನ ಜಿಲ್ಲೆಯಲ್ಲಿ 3925 ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಯಾಗಿವೆ. ಇದರಿಂದಾಗಿ ಅನೇಕ ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ರೇಷನ್ ಮತ್ತು 2000 ರೂಪಾಯಿ ನೆರವು ಕಳೆದುಕೊಂಡಿರುವ ಬಗ್ಗೆ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
ಹಾಸನ, ನವೆಂಬರ್ 16: ಹಾಸನ ಜಿಲ್ಲೆಯಲ್ಲಿ 3 ಸಾವಿರದ 925 ಬಿಪಿಎಲ್ ಕಾರ್ಡ್‌ಗಳು (bpl cards) ಎಪಿಎಲ್ ಕಾರ್ಡ್‌ಗಳಾಗಿ ಬದಲಾವಣೆಯಾಗಿವೆ. ಹಲವರ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಮತ್ತೊಂದಷ್ಟು ಜನರದ್ದು ಎಪಿಎಲ್ ಆಗಿ ಮಾರ್ಪಟ್ಟಿರೋದಕ್ಕೆ ಹಾಸನ ಜನತೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೂಲಿ ಮಾಡೋರು ಎಲ್ಲಿ ಹೋಗೋದು ಅಂತಾ ಪ್ರಶ್ನಿಸಿದ್ದಾರೆ. ರೇಷನ್ ಅಷ್ಟೇ ಅಲ್ಲ, 2 ಸಾವಿರ ರೂಪಾಯಿ ಕೂಡ ಬರ್ತಿಲ್ಲ ಅಂತಾ ಮಹಿಳೆಯೊಬ್ಬರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 16, 2024 09:43 PM
Latest Videos