‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ

‘ಶ್… ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ

ಮಂಜುನಾಥ ಸಿ.
|

Updated on: Nov 16, 2024 | 6:59 PM

Bigg Boss Kannada: ವಾರದ ಪಂಚಾಯಿತಿ ನಡೆಸಿಕೊಡಲು ಬಂದಿರುವ ಕಿಚ್ಚ ಸುದೀಪ್, ಚೈತ್ರಾ ಕುಂದಾಪುರ ಮೇಲೆ ಸಿಟ್ಟಾಗಿದ್ದಾರೆ. ಸಾಮಾನ್ಯವಾಗಿ ಯಾರ ಮೇಲೂ ಸಿಟ್ಟಾಗದ ಸುದೀಪ್, ಚೈತ್ರಾ ಮೇಲೆ ಸಿಟ್ಟಾಗಲು ಕಾರಣ ಏನು?

ಬಿಗ್​ಬಾಸ್ ಕನ್ನಡ ಸೀಸನ್ 11 ರ ವೀಕೆಂಡ್ ಎಪಿಸೋಡ್ ಇಂದು ನಡೆಯಲಿದೆ. ವಾರದ ಪಂಚಾಯಿತಿ ನಡೆಸಿಕೊಡಲು ಸುದೀಪ್ ಬಂದಿದ್ದಾರೆ. ಈ ವಾರ ಸಾಕಷ್ಟು ಡ್ರಾಮಾ, ಟಾಸ್ಕ್, ತಮಾಷೆ ಇನ್ನಿತರೆಗಳಿಗೆ ಬಿಗ್​ಬಾಸ್ ಮನೆ ಸಾಕ್ಷಿಯಾಗಿದೆ. ಈ ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ತುಸು ಹೆಚ್ಚೇ ಸಿಟ್ಟಾಗಿದ್ದಾರೆ. ಸುದೀಪ್ ಈ ಹಿಂದೆಯೂ ಬಿಗ್​ಬಾಸ್​ನಲ್ಲಿ ಸಿಟ್ಟಾಗಿದ್ದಾರೆ. ಆದರೆ ಮಹಿಳಾ ಕಂಟೆಸ್ಟ್​ಗಳ ಮೇಲೆ ಸಿಟ್ಟಾಗಿದ್ದು ಬಹಳ ಕಡಿಮೆ. ಆದರೆ ಇದೀಗ ಚೈತ್ರಾ ಮೇಲೆ ಸಿಟ್ಟಾಗಿದ್ದಾರೆ. ಅನಾರೋಗ್ಯದ ಕಾರಣ ಹೇಳಿ ಚಿಕಿತ್ಸೆಗಾಗಿ ಹೊರಗೆ ಹೋಗಿದ್ದ ಚೈತ್ರಾ, ಅಲ್ಲಿ ವೈದ್ಯರಿಂದ, ನರ್ಸ್​ಗಳಿಂದ ಬಿಗ್​ಬಾಸ್ ಬಗ್ಗೆ ಅಭಿಪ್ರಾಯಗಳನ್ನು ಕೇಳಿಕೊಂಡು ಬಂದಿದ್ದಾರೆ ಇದು ಸುದೀಪ್ ಸಿಟ್ಟಿಗೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ