ಚಾಮುಂಡಿಬೆಟ್ಟದಲ್ಲಿ ಸಿದ್ದರಾಮಯ್ಯ ಪರ ಮಾತಾಡಿದ್ದು ಅಪರಾಧವಾಗಿದೆ: ಜಿಟಿ ದೇವೇಗೌಡ
ದೇವೇಗೌಡ ಅವರು ಕೋರ್ ಕಮಿಟಿ ಅಧ್ಯಕ್ಷರಾಗಿದ್ದರೂ, ಅವರು ಪಬ್ಲಿಕ್ ಅಕೌಂಟ್ಸ್ ಕಮಿಟಿ ಜೊತೆ ಪ್ರವಾಸ ಹೋಗಿದ್ದಾಗ ಅವರ ಹೆಸರಲ್ಲೇ ಮೀಟಿಂಗ್ ಕರೆದು ಅವರ ಅನುಪಸ್ಥಿತಿಯಲ್ಲಿ ಸುರೇಶ್ ಗೌಡರನ್ನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆಯಂತೆ. ಪಕ್ಷಕ್ಕೆ ತಾನ್ಯಾಕೆ ಬೇಡವಾಗದ್ದೇನೆ ಅಂತ ಕುಮಾರಸ್ವಾಮಿಯವರೇ ಹೇಳಬೇಕು ಎಂದು ದೇವೇಗೌಡ ಹೇಳುತ್ತಾರೆ.
ಮಂಗಳೂರು: ಜಿಟಿ ದೇವೇಗೌಡ ಅವರು ಹೆಚ್ ಡಿ ಕುಮಾರಸ್ವಾಮಿಯಿಂದ ಯಾಕೆ ದೂರವಾಗಿದ್ದಾರೆ ಅಂತ ಖುದ್ದು ದೇವೇಗೌಡರೇ ಮಂಗಳೂರಲ್ಲಿ ಹೇಳಿದರು. ಸಿದ್ದರಾಮಯ್ಯ ಅವರನ್ನು ಈಗಲೇ ತಪ್ಪಿತಸ್ಥ ಅನ್ನೋದು ಸರಿಯಲ್ಲ, ತನಿಖಾ ಏಜೆನ್ಸಿಗಳು ವಿಚಾರಣೆ ನಡೆಸುತ್ತಿವೆ, ತನಿಖೆ ಮುಗಿದು ಕೋರ್ಟ್ ಅವರನ್ನು ದೋಷಿ ಅಂತ ಘೋಷಿಸಿದ ಬಳಿಕ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತೆ ಆಗ್ರಹಿಸುವುದು ಸರಿಯೆನಿಸುತ್ತದೆ, ತಾನು ಚಾಮುಂಡಿ ಬೆಟ್ಟದಲ್ಲಿ ಇಷ್ಟು ಹೇಳಿದ್ದು, ಅದನ್ನೇ ಮಹಾ ಅಪರಾಧ ಎನ್ನವಂತೆ ಪರಿಗಣಿಸಲಾಗಿದೆ ಎಂದು ದೇವೇಗೌಡ ಹೇಳಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಿಟಿ ದೇವೇಗೌಡ ಮತ್ತು ತನ್ನ ನಡುವೆ ಮುನಿಸಿರುವದನ್ನು ಅಂಗೀಕರಿಸಿದ ಹೆಚ್ಡಿ ಕುಮಾರಸ್ವಾಮಿ