AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಮಹತ್ವದ ಚರ್ಚೆ! ಇಲಾಖೆ ಮಟ್ಟದಲ್ಲೇ ಸಮಿತಿ ರಚನೆ ಸಾಧ್ಯತೆ

‘ಅನ್ನಭಾಗ್ಯ’ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಐದು ಕೆಜಿ ಉಚಿತ ಅಕ್ಕಿಯ ಜೊತೆಗೆ ಪ್ರತಿ ತಿಂಗಳು ಓರ್ವ ವ್ಯಕ್ತಿಗೆ 170 ರೂ. ಕೊಡುತ್ತಿದೆ. ಆದರೀಗ ಈ ಯೋಜನೆಯನ್ನ ನಕಲಿ ಫಲಾನುಭವಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಟಿವಿ9  ಸುದ್ದಿ ಪ್ರಸಾರ ಮಾಡಿದ ಬಳಿಕ ಎಚ್ಚೆತ್ತ‌ ಸರ್ಕಾರ, ಇದೀಗ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮುಂದಾಗಿದೆ.

ನಕಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಮಹತ್ವದ ಚರ್ಚೆ! ಇಲಾಖೆ ಮಟ್ಟದಲ್ಲೇ ಸಮಿತಿ ರಚನೆ ಸಾಧ್ಯತೆ
ನಕಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಮಹತ್ವದ ಚರ್ಚೆ
Anil Kalkere
| Edited By: |

Updated on: Sep 07, 2024 | 7:58 PM

Share

ಬೆಂಗಳೂರು, ಸೆ.07: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆ.ಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಸದ್ಯ ಕೇಂದ್ರ ಸಹಕಾರ ನೀಡಲಿಲ್ಲ ಎಂದು 5 ಕೆ.ಜಿ ಅಕ್ಕಿ ಹಾಗೂ ಓರ್ವ ವ್ಯಕ್ತಿಗೆ ಪ್ರತಿ ತಿಂಗಳು 170 ರೂ. ಕೊಡುವ ಯೋಜನೆಯನ್ನ ಕೈಗೆತ್ತಿಕೊಂಡಿತ್ತು. ಆದರೆ, ನಕಲಿ ಬಿಪಿಎಲ್ ಕಾರ್ಡ್(BPL Card) ಫಲಾನುಭವಿಗಳು ಇದರ ದುರುಪಯೋಗ ಪಡೆದುಕೊಳ್ಳುವ ಪ್ರಮಾಣ ಹೆಚ್ಚಾಗಿದ್ದು. ಇದರ ಬಗ್ಗೆ ಬೆಳಕು ಚೆಲ್ಲಿದ ಟಿವಿ9ನ ನಿರಂತರ ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕೊನೆಗೂ ನಕಲಿ ಬಿಪಿಎಲ್ ಕಾರ್ಡ್​ಗಳಿಗೆ ಗುನ್ನಾ ಇಡಲು ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಣದ ಬದಲಿಗೆ ಆಹಾರ ಅಂದರೆ ಎಣ್ಣೆ, ಬೇಳೆಯನ್ನೊಳ್ಳಗೊಂಡ ಫುಡ್ ಕಿಟ್ ನೀಡುವ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು. ಸದ್ಯ ನಕಲಿ ಬಿಪಿಎಲ್ ಕಾರ್ಡ್​ಗಳನ್ನ ತಡೆದು ನಂತರ ಆಹಾರ ಕಿಟ್ ವಿತರಣೆ ಸಂಬಂಧ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಬರೋಬ್ಬರಿ 1 ಕೋಟಿ 13 ಲಕ್ಷ ಜನರ ಬಳಿ ನಕಲಿ ಬಿಪಿಎಲ್ ಕಾರ್ಡ್​ಗಳಿವೆ ಶೇ.80 ರಷ್ಟು ಜನರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ. ಈಗಾಗಲೇ ನೀತಿ ಆಯೋಗವೂ ಸಹ ತೀವ್ರ ಆಕ್ಷೇಪವನ್ನ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಮನೆಯಲ್ಲಿ TV, ಬೈಕ್, ಫ್ರಿಡ್ಜ್ ಹೊಂದಿರುವವರು.. BPL ಕಾರ್ಡ್​ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ -ಸಚಿವ ಉಮೇಶ್​ ಕತ್ತಿ

ಇದರಿಂದ ಮುಂದಿನ ದಿನಗಳಲ್ಲಿ‌ ದೊಡ್ಡ ಮಹತ್ವದ ಬೆಳವಣಿಗೆ ಆಗಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಕಲಿ ಬಿಪಿಎಲ್ ಕಾರ್ಡ್‌ ಗಳನ್ನ ಪತ್ತೆ ಮಾಡಿ ಎಪಿಎಲ್ ಕಾರ್ಡ್​ಗೆ ವರ್ಗಾಯಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಇಲಾಖಾ ಮಟ್ಟದಲ್ಲೇ ಸಮಿತಿ ರಚನೆಗೆ ಚಿಂತನೆ ನಡೆಸಲಾಗುತ್ತಿದೆ. ಕಮಿಟಿ ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವವರನ್ನ ಪರಿಶೀಲನೆ ನಡೆಸಿ, ಅವರನ್ನ ಎಪಿಎಲ್ ಕಾರ್ಡ್ ಗೆ ಸೇರಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಲು ಕೆಲವು ಅರ್ಹತೆಗಳು ಬೇಕಾಗಿದೆ. ಆ‌ರ್ಹತೆ ಹಾಗೂ ಮಾನದಂಡವನ್ನ ಆಧರಿಸಿ ಎಪಿಎಲ್ ಹಾಗೂ ಬಿಪಿಎಲ್ ಎಂದು ಗುರುತಿಸಲಾಗುತ್ತದೆ.

ಬಿಪಿಎಲ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆ ಹೇಗೆ?

  • ಆದಾಯ ತೆರಿಗೆ
  • ಉದ್ಯೋಗ
  • ಸಾಮಾಜಿಕ ಸ್ಥಿತಿಗತಿ
  • ಪಡಿತರದಾರರ ಹಿನ್ನೆಲೆ
  • ಆಧಾರ್ ಕಾರ್ಡ್ ಸಂಪೂರ್ಣ ಲಿಂಕ್ ಮಾಡುವ ಯೋಜನೆ ಮಾಡಲಾಗುತ್ತಿದೆ.

ಇನ್ನು ಬೇರೆ ರಾಜ್ಯಗಳ ಸ್ಥಿತಿಗತಿಯನ್ನ ಗಮನಿಸುವುದಾದರೆ, ತಮಿಳುನಾಡು, ಕೇರಳ, ಆಂಧ್ರ ಹಾಗೂ ತೆಲಂಗಾಣ ಪ್ರದೇಶಗಳಲ್ಲೇ ಯಾವುದೂ 50% ಗಿಂತ ಜಾಸ್ತಿ ಬಿಪಿಎಲ್ ಕಾರ್ಡ್ ಇಲ್ಲ. ಆದರೆ, ನಮ್ಮಲ್ಲಿ‌ ಬಿಪಿಎಲ್ ಶೇ.80% ಇದೆ. ಅನೇಕ ಸರ್ಕಾರಗಳ ಬಂದು ಬದಲಾದಂತೆ ನಕಲಿ ಬಿಪಿಎಲ್ ಕಾರ್ಡ್ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿದೆ. ಯಾವುದೇ ಬಿಪಿಎಲ್ ಕಾರ್ಡ್​ದಾರರು ಆದಾಯ ತೆರಿಗೆ ಪಾವತಿದಾರರಾಗಬಾರದು. ಆದಾಯ 1200 ರೂ.ಗಿಂತ ಜಾಸ್ತಿ ಇರಬಾರದು ಎಂಬ ಗೈಡ್ ಲೈನ್ಸ್ ಇದೆ. ಇದೀಗ ಆ ಗೈಡ್ ಲೈನ್ ಆಧರಿಸಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪರಿಶೀಲನೆ ನಡೆಸಲು ಮುಂದಾಗಿದೆ. ಇದು ಪೂರ್ಣವಾದ ಬಳಿಕೆ‌ ಎಷ್ಟು ಬಿಪಿಎಲ್ ಇದೆ, ಅದನ್ನ ಎಪಿಎಲ್​ಗೆ ಹಾಕುತ್ತೇವೆ. ಆಗ ಬಿಪಿಎಲ್​ನಲ್ಲಿ ಅನರ್ಹ ಇದ್ದವರು ಎಪಿಎಲ್​ಗೆ ಹೋಗುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ಒಟ್ಟಾರೆ, ನಕಲಿ ಬಿಪಿಎಲ್ ಕಾರ್ಡ್ ಹಾವಳಿ ಬಗ್ಗೆ ಸುದ್ದಿ ಮಾಡಿದ್ದ ಟಿವಿ9, ಇದೀಗ ಸರ್ಕಾರಕ್ಕೆ ಕಣ್ಣು ತೆರೆಸಿದೆ. ಕೊನೆಗೂ ಎಚ್ಚೆತ್ತ ಆಹಾರ ಇಲಾಖೆ ಹಾಗೂ ರಾಜ್ಯ ಸರ್ಕಾರ, ನಕಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮುಂದಾಗಿರುವುದು ಮಹತ್ವದ ಬೆಳವಣಿಗೆಯೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?