AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಎಕ್ಸ್ ಪೋಗೆ ಎರಡನೇ ದಿನ ಕೂಡ ಭರ್ಜರಿ ರೆಸ್ಪಾನ್ಸ್: ಲಕ್ಕಿ ಡಿಪ್​ ಗೆದ್ದ ಗ್ರಾಹಕರು

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ ಯಶಸ್ವಿಯಾಗಿದೆ! ಎರಡನೇ ದಿನವೂ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. 60 ಕ್ಕೂ ಹೆಚ್ಚು ಬಿಲ್ಡರ್‌ಗಳು ಭಾಗವಹಿಸಿದ್ದು, ಗ್ರಾಹಕರು ಸೈಟ್, ಅಪಾರ್ಟ್‌ಮೆಂಟ್ ಮಾಹಿತಿ ಪಡೆದಿದ್ದಾರೆ. ಲಕ್ಕಿ ಡಿಪ್ ಮೂಲಕ ಗಿಫ್ಟ್ ವೋಚರ್‌ಗಳು ಮತ್ತು ಇಂದು ಬಹುಮಾನಗಳನ್ನು ವಿತರಿಸಲಾಗಿದೆ. ನಾಳೆ ಕೊನೆ ದಿನವಾಗಿದೆ.

ಟಿವಿ9 ಎಕ್ಸ್ ಪೋಗೆ ಎರಡನೇ ದಿನ ಕೂಡ ಭರ್ಜರಿ ರೆಸ್ಪಾನ್ಸ್: ಲಕ್ಕಿ ಡಿಪ್​ ಗೆದ್ದ ಗ್ರಾಹಕರು
ಟಿವಿ9 ಎಕ್ಸ್ ಪೋಗೆ ಎರಡನೇ ದಿನ ಕೂಡ ಭರ್ಜರಿ ರೆಸ್ಪಾನ್ಸ್: ಲಕ್ಕಿ ಡಿಪ್​ ಗೆದ್ದ ಗ್ರಾಹಕರು
Vinayak Hanamant Gurav
| Edited By: |

Updated on: Nov 16, 2024 | 8:41 PM

Share

ಬೆಂಗಳೂರು, ನವೆಂಬರ್​ 16: ನಿನ್ನೆಯಿಂದ ಆರಂಭವಾಗಿರುವ ಟಿವಿ9 ಸ್ವೀಟ್ ಹೋಮ್ ರಿಯಲ್‌ ಎಸ್ಟೇಟ್ ಎಕ್ಸ್ ಪೋ (Tv9 Sweet Home Expo) ಗೆ ಸಾಕಷ್ಟು ಜನರು ಭೇಟಿ ನೀಡುತ್ತಿದ್ದಾರೆ. ಎರಡನೇ ದಿನವಾದ ಇಂದು ಕೂಡ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದು ಎಕ್ಸ್ ಪೋದಲ್ಲಿ ಭಾಗಿಯಾದವರು ಲಕ್ಕಿ ಡಿಪ್ ಮೂಲಕ ಗಿಫ್ಟ್ ವೋಚರ್ ತಮ್ಮದಾಗಿಸಿಕೊಂಡಿದ್ದಾರೆ.

ಟಿವಿ9 ಎಕ್ಸ್ ಪೋಗೆ ಗ್ರಾಹಕರಿಂದ ಭಾರಿ ರೆಸ್ಪಾನ್ಸ್ !

ಹೌದು. ಪ್ರತಿಸಲದಂತೆ ಗ್ರಾಹಕರ ರೆಸ್ಪಾನ್ಸ್ ಮೇರೆಗೆ ಟಿವಿ9 ಸ್ವೀಟ್ ಹೋಮ್ ರಿಯಲ್‌ ಎಸ್ಟೇಟ್ ಎಕ್ಸ್‌ಪೋ ಆಯೋಜನೆ ಮಾಡಲಾಗುತ್ತಿದ್ದು, ಈ ಬಾರಿ 15ನೇ ಆವೃತ್ತಿಯ ಟಿವಿ9 ಸ್ವೀಟ್ ಹೋಮ್ ಎಕ್ಸ್ ಪೋ ನ. 15ರಿಂದ ಮೂರು ದಿನಗಳ ಕಾಲ ನಾಯಂಡಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ನಡೆಯುತ್ತಿದ್ದು, ಎರಡನೇ ದಿನವಾದ ಇಂದು ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವೀರಲೋಕದಿಂದ ನ. 15ರಿಂದ 17ರವರೆಗೆ ಪುಸ್ತಕ ಸಂತೆ

ಟಿವಿ9 ಎಕ್ಸ್ ಪೋ ನಲ್ಲಿ 60 ಕ್ಕೂ ಅಧಿಕ ಬಿಲ್ಡರ್ಸ್ ಆ್ಯಂಡ್ ಡೆವಲರ್ಪರ್ಸ್ ಗ್ರೂಪ್ ಗಳು ಭಾಗಿಯಾಗಿದ್ದು, ಒಂದೇ ಸ್ಥಳದಲ್ಲಿ ಸೈಟ್, ಅಪಾರ್ಟ್‌ಮೆಂಟ್ ಹಾಗೂ ಹಣ ಹೂಡಿಕೆ ಕುರಿತಂತೆ ಗ್ರಾಹಕರು ಮಾಹಿತಿ ಪಡೆದುಕೊಂಡರು. ಇನ್ನೂ ಎಕ್ಸ್ ಪೋನಲ್ಲಿ ಭಾಗಿಯಾದ ಗ್ರಾಹಕರಿಗಾಗಿ ಲಕ್ಕಿ ಡಿಪ್ ಆಯೋಜನೆ ಮಾಡಲಾಗಿತ್ತು. ಲಕ್ಕಿ ಡಿಪ್ ಮೂಲಕ ಆಯ್ಕೆಯಾದ ವಿಜೇತ ಗ್ರಾಹಕರಿಗೆ ಪೆಪ್ಸ್​ನಿಂದ ವೋಚರ್ ವಿತರಿಸಲಾಯಿತು. ಇನ್ನೂ ಲಕ್ಕಿ ಡಿಪ್ ಮೂಲಕ ವಿನ್ನರ್ ಆದ ಗ್ರಾಹಕರು ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ನಾಳೆ ಕೊನೆಯ ದಿನದ ಟಿವಿ9 ಸ್ವೀಟ್ ಹೋಮ್ ಎಕ್ಸ್ ಪೋ ಇದ್ದು, ಎಕ್ಸ್ ಪೋ ದಲ್ಲಿ ಭಾಗಿಯಾಗುವವರಿಗೆ ಲಕ್ಕಿ ಡಿಪ್ ಮೂಲಕ ಬಂಪರ್ ಗಿಫ್ಟ್ ನೀಡಲಾಗುತ್ತಿದೆ. ಲಕ್ಕಿ ಡಿಪ್ ಮೂಲಕ ಆಯ್ಕೆ ಆದ ಗ್ರಾಹಕರಿಗೆ ಎಸ್ ಮೊಬಿಲಿಟಿ ವತಿಯಿಂದ ಎಲೆಕ್ಟ್ರಿಕಲ್ ಬೈಕ್ ನೀಡಲಾಗುತ್ತಿದೆ.

ನಾಳೆ ಕೊನೆ ದಿನ

ಗ್ರಾಹಕರ ರೆಸ್ಪಾನ್ಸ್ ಮೇರೆಗೆ ಪ್ರತಿ ಸಲದಂತೆ ಟಿವಿ9 ಸ್ವೀಟ್ ಹೋಮ್ ಎಕ್ಸ್ ಪೋ ನಡೆಯುತ್ತಿದ್ದು, ಎರಡನೇ ದಿನವಾದ ಇಂದು ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ದೊರೆಯಿತು. ನಾಳೆ ಕೊನೆ ದಿನ ಆದ್ದರಿಂದ ಎಕ್ಸ್ ಪೋಗೆ ಭೇಟಿ ನೀಡಿ ಲಾಭ ಪಡೆದುಕೊಳ್ಳೋದರ ಜೊತೆಗೆ ಲಕ್ಕಿ ಡಿಪ್ ವಿನ್ನರ್ ಆಗೋ ಮೂಲಕ ಎಲೆಕ್ಟ್ರಿಕ್ ಬೈಕ್ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.