ಬಾಂಬ್ ಇದೆ ಎಂದು ಆಟೋ ಸಮೇತ ಪೊಲೀಸ್ ಠಾಣೆಗೆ ಬಂದ ಚಾಲಕ: ಮುಂದೇನಾಯ್ತು?
ಬೆಂಗಳೂರಿನ ಜಯನಗರದಲ್ಲಿ ಆಟೋ ಚಾಲಕ ಬಾಂಬ್ ಇದೆ ಎಂದು ಹೇಳಿ ಆಟೋವನ್ನು ಪೊಲೀಸ್ ಠಾಣೆಗೆ ತಂದಿರುವಂತಹ ಘಟನೆ ನಡೆದಿದೆ. ಆಟೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಗ್ ಇಟ್ಟು ಹೋಗಿದ್ದ. ಬಾಂಬ್ ಸ್ಕ್ವಾಡ್ ತಪಾಸಣೆ ಮಾಡಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.
ಬೆಂಗಳೂರು, ನವೆಂಬರ್ 16: ಬಾಂಬ್ (bomb) ಇದೆ ಎಂದು ಆಟೋ ಸಮೇತ ಚಾಲಕ ಜಯನಗರ ಪೊಲೀಸ್ ಠಾಣೆಗೆ ಬಂದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿ ಆಟೋದಲ್ಲಿ ಬ್ಯಾಗ್ ಇಟ್ಟು ಹೋಗಿದ್ದರು. ಬಾಂಬ್ ಸ್ಕ್ವಾಡ್ನಿಂದ ಪರಿಶೀಲನೆ ಮಾಡಿದ್ದಾಗ ಯಾವುದೇ ಸ್ಫೋಟಕ ವಸ್ತು ಪತ್ತೆ ಆಗಿಲ್ಲ.
ಬಾಂಬ್ ಇದೆ ಎಂದು ಆಟೋ ಚಾಲಕ ಜಯನಗರ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ತಕ್ಷಣ ಬಿಎಸ್ಎನ್ಎಲ್ ಟೆಲಿಪೋನ್ ಎಕ್ಸ್ಚೇಂಚ್ ಎದುರು ಇರುವ ಆಟದ ಮೈದಾನಕ್ಕೆ ತೆಗೆದುಕೊಂಡು ಬಂದಿದ್ದಾರೆ. ಬಳಿಕ ಬಾಂಬ್ ಸ್ಕ್ವಾಡ್ ಸಿಬ್ಬಂದಿಯಿಂದ ಪರಿಶೀಲನೆ ಮಾಡಿದಾಗ ಆಟೋದ ಹಿಂದಿನ ಸೀಟ್ನಲ್ಲಿ ಎರಡು ಚೀಲಗಳು ಪತ್ತೆ ಆಗಿದೆ. ಬ್ಯಾಗ್ ತೆರೆದು ನೋಡಿದಾಗ ಡ್ರಿಲ್ಲಿಂಗ್ ಮಷಿನ್ ಬಿಡಿ ಭಾಗಗಳು ಪತ್ತೆ ಆಗಿಲ್ಲ. ಯಾವುದೇ ರೀತಿಯ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.
ಇದನ್ನೂ ಓದಿ: ‘ಬ್ರ್ಯಾಂಡ್ ಬೆಂಗಳೂರು’ ಥೀಮ್ ಗೆ ತದ್ವಿರುದ್ಧ ಬೆಂಗಳೂರ್ ರೋಡ್, ರಸ್ತೆಗುಂಡಿಗಳಿಂದ ವಾಹನಗಳು ಪಲ್ಟಿ, ವಿಡಿಯೋ ವೈರಲ್
ಇನ್ನು ಬೆಂಗಳೂರಿನಲ್ಲಿ ಪದೇ ಪದೇ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿದ್ದವು. ಸ್ಕೂಲ್ಸ್, ಹೋಟೆಲ್ಸ್ ಬಳಿಕ ಕಾಲೇಜ್ಗಳಿಗೂ ಬಾಂಬ್ ಬೆದರಿಕೆ ಬಂದಿದ್ದವು. ಹೀಗಾಗಿ ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರು ಕೂಡ ಭಯಗೊಂಡಿದ್ದರು.
ಇತ್ತೀಚೆಗೆ ನಗರದ ಬಿಎಂಎಸ್, ಎಂಎಸ್ ರಾಮಯ್ಯ ಹಾಗೂ ಬಿಐಟಿ ಇಂಜಿನಿಯರಿಂಗ್ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಇದರಿಂದ ಕಾಲೇಜು ಆವರಣಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಧ್ಯಾಹ್ನ ಕಾಲೇಜಿನ ಇಮೇಲ್ಗೆ ಬಂದಿದ್ದ ಬೆದರಿಕೆ ಸಂದೇಶವನ್ನ ನೋಡಿ ಗಾಬರಿಯಾದ ಕಾಲೇಜು ಆಡಳಿತ ತಕ್ಷಣವೇ ಸ್ಥಳೀಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು. ಇದರಿಂದ ಸ್ಥಳಕ್ಕೆ ದೌಡಯಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಇಡೀ ಕಾಲೇಜನ್ನ ಪರಿಶೀಲನೆ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ
ಸಂಜೆ ಐದು ಗಂಟೆ ಒಳಗೆ ಕಾಲೇಜಿನಿಂದ ಹೊರ ಹೋಗದೆ ಇದ್ದರೆ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಉಲ್ಲೇಖಿಸಲಾಗಿತ್ತು. ಮೂರು ಗಂಟೆಗಳಿಗೂ ಅಧಿಕ ಕಾಲ ಕಾಲೇಜುಗಳಲ್ಲಿ ಪರಿಶೀಲನೆ ನಡೆಸಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:21 pm, Sat, 16 November 24