ಬೆಂಗಳೂರಿನಲ್ಲಿ ವೀರಲೋಕದಿಂದ ನ. 15ರಿಂದ 17ರವರೆಗೆ ಪುಸ್ತಕ ಸಂತೆ

ಪುಸ್ತಕ ಸಂತೆಗೆ ವೀರಲೋಕದ ಜೊತೆಗೆ ಹಲವು ಸಂಸ್ಥೆಗಳು ಕೈಜೋಡಿಸಿವೆ. ನೂರಾರು ಪ್ರಕಾಶಕರು ಇಲ್ಲಿ ಸ್ಟಾಲ್‌ಗಳನ್ನು ಹಾಕುತ್ತಿದ್ದಾರೆ. ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಪುಸ್ತಕ ಸಂತೆಯಲ್ಲಿ ಪಾಲ್ಗೊಳ್ಳುತ್ತಿದೆ. ಜೊತೆಗೆ ಕನ್ನಡ ನಾಡಿನ ಅಷ್ಟೂ ಸರ್ಕಾರಿ ನೌಕರರ ಸಂಘ ಸಂಸ್ಥೆಗಳನ್ನೂ ಭಾಗವಹಿಸುವಂತೆ ಕೋರಲಾಗಿದೆ.

ಬೆಂಗಳೂರಿನಲ್ಲಿ ವೀರಲೋಕದಿಂದ ನ. 15ರಿಂದ 17ರವರೆಗೆ ಪುಸ್ತಕ ಸಂತೆ
ಪುಸ್ತಕ ಸಂತೆ
Follow us
ಸುಷ್ಮಾ ಚಕ್ರೆ
|

Updated on:Nov 13, 2024 | 2:14 PM

ಬೆಂಗಳೂರು: ಕನ್ನಡದ ಪ್ರಮುಖ ಪ್ರಕಾಶನವಾದ ʼವೀರಲೋಕʼದ ವತಿಯಿಂದ ಎರಡನೇ ವರ್ಷದ ʼಪುಸ್ತಕ ಸಂತೆʼ ನವೆಂಬರ್‌ 15, 16 ಹಾಗೂ 17ರಂದು ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯಲಿದೆ. ನೂರಾರು ಲೇಖಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ಹತ್ತಾರು ಕೃತಿಗಳು ಬಿಡುಗಡೆಗೊಳ್ಳಲಿವೆ ಎಂದು ವೀರಲೋಕದ ರೂವಾರಿ ವೀರಕಪುತ್ರ ಶ್ರೀನಿವಾಸ್‌ ತಿಳಿಸಿದ್ದಾರೆ.

ಕನ್ನಡ ಪುಸ್ತಕಗಳು ಎಲ್ಲೆಂದರಲ್ಲಿ ಸಿಗಬೇಕು, ಕನ್ನಡಿಗರು ಇರುವ ಕಡೆಯೇ ಪುಸ್ತಕಗಳು ಸಿಗಬೇಕು. ಕನ್ನಡ ಪುಸ್ತಕಗಳು ಕನ್ನಡಿಗರ ಬದುಕಿನ ಭಾಗವಾಗಬೇಕು ಎಂಬ ಆಶಯಗಳೊಂದಿಗೆ ವೀರಲೋಕ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಅಂಥದ್ದೇ ಒಂದು ಪ್ರಯತ್ನ ಪುಸ್ತಕ ಸಂತೆ. ಕಳೆದ ವರ್ಷ ನಡೆದ ಪುಸ್ತಕ ಸಂತೆಯ ಮೊದಲ ಆವೃತ್ತಿ ಭಾರೀ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷವೂ ಪ್ರಕಾಶಕರು, ಲೇಖಕರು ಹಾಗೂ ಓದುಗರನ್ನು ಒಟ್ಟುಗೂಡಿಸುವ ಹಬ್ಬಕ್ಕೆ ವೀರಲೋಕ ಮುಂದಾಗಿದೆ.

ಇದನ್ನೂ ಓದಿ: ಈ ಐಪಿಎಸ್ ಅಧಿಕಾರಿ ಬಳಿ ಇವೆ 15 ಸಾವಿರಕ್ಕೂ ಹೆಚ್ಚು ಕಾಮಿಕ್ಸ್‌ ಪುಸ್ತಕಗಳು

ಪುಸ್ತಕ ಸಂತೆಗೆ ವೀರಲೋಕದ ಜೊತೆಗೆ ಹಲವು ಸಂಸ್ಥೆಗಳು ಕೈಜೋಡಿಸಿವೆ. ನೂರಾರು ಪ್ರಕಾಶಕರು ಇಲ್ಲಿ ಸ್ಟಾಲ್‌ಗಳನ್ನು ಹಾಕುತ್ತಿದ್ದಾರೆ. ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಪುಸ್ತಕ ಸಂತೆಯಲ್ಲಿ ಪಾಲ್ಗೊಳ್ಳುತ್ತಿದೆ. ಜೊತೆಗೆ ಕನ್ನಡ ನಾಡಿನ ಅಷ್ಟೂ ಸರ್ಕಾರಿ ನೌಕರರ ಸಂಘ ಸಂಸ್ಥೆಗಳನ್ನೂ ಭಾಗವಹಿಸುವಂತೆ ಕೋರಲಾಗಿದೆ. ಓದುಗರು ಹಾಗೂ ಲೇಖಕರು ಮುಖಾಮುಖಿಯಾಗಿಸುವುದು ಈ ಪ್ರಯೋಗದ ಉದ್ದೇಶ.

ತನ್ನ ಮೆಚ್ಚಿನ ಲೇಖಕರನ್ನು ಕಾಣುವ ಆಸೆ ಓದುಗರಿಗಿರಬಹುದು, ತಮ್ಮ ಅನಾಮಿಕ ಓದುಗರನ್ನು ಭೇಟಿಯಾಗುವ ಆಸೆ ಸಾಹಿತಿಗಳಿಗೂ ಇರಬಹುದು. ಆ ಇಬ್ಬರ ಮುಖಾಮುಖಿಗೆ ಈ ಸಂತೆ ವೇದಿಕೆಯಾಗುತ್ತಿದೆ. ಇಂತಹ ಪ್ರಯೋಗಕ್ಕೆ ತುಂಬು ಪ್ರೀತಿಯಿಂದ ಒಪ್ಪಿಗೆ ನೀಡಿದ ಎಲ್ಲಾ ಸಾಹಿತಿಗಳಿಗೆ ವೀರಲೋಕ ಮನದಾಳದ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ ಎಂದು ವೀರಕಪುತ್ರ ಶ್ರೀನಿವಾಸ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲೂ ತಲೆ ಎತ್ತಲಿದೆ ಟ್ರಂಪ್ ಟವರ್; ಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು

ಈ ಪುಸ್ತಕ ಸಂತೆ ಧೂಳು ಮುಕ್ತವಾಗಿರುತ್ತೆ ಎಂಬ ಖಾತ್ರಿ ವೀರಲೋಕದ್ದು. ಸುಮಾರು 20 ಸಾವಿರ ಅಡಿಯಷ್ಟು ಸ್ಥಳಕ್ಕೆ ಒಂದು ಅಡಿಯಷ್ಟು ಎತ್ತರದ ಪ್ಲಾಟ್ ಫಾರ್ಮ್ ಹಾಕಿ, ಅದರ ಮೇಲೆ ರತ್ನಗಂಬಳಿ ಹೊದಿಸಿ, ತಲೆ ಮೇಲೆ ಜರ್ಮನ್ ಟೆಂಟ್ ಹಾಕಿಸಿ, ಜಗಮಗ ಅನ್ನೋ ದೀಪಗಳನ್ನು ಬೆಳಗಿಸಿ ಲೇಖಕ ಓದುಗರನ್ನು ಸ್ವಾಗತಿಸಲು ಕಾಯುತ್ತಿದ್ದೇವೆ ಎಂದು ವೀರಕಪುತ್ರ ಶ್ರೀನಿವಾಸ್‌ ಅವರು ತಿಳಿಸಿದ್ದಾರೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Tue, 12 November 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ