ಕೇವಲ ಮಾಂಸಾಹಾರದಲ್ಲಿ ಮಾತ್ರ ಪೌಷ್ಠಿಕಾಂಶ ಅಡಗಿರುವುದಿಲ್ಲ, ಸಸ್ಯಾಹಾರದ ಅನೇಕ ಪದಾರ್ಥಗಳು ಪ್ರೊಟೀನಿನ ಭಂಡಾರವಾಗಿವೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 22, 2022 | 12:48 AM

ನಮ್ಮಲ್ಲೊಂದು ಅಪನಂಬಿಕೆ ಇದೆ, ಮಾಂಸಾಹಾರ ಸೇವಿಸಿದರೆ ಮಾತ್ರ ದೇಹಕ್ಕೆ ಪ್ರೋಟೀನು ಸಿಗುತ್ತದೆ ಅನ್ನೋದು. ಹಾಗೇನೂ ಇಲ್ಲ ಮಾರಾಯ್ರೇ. ಸಸ್ಯಾಹಾರದ ಭಾಗವಾಗಿರುವ ಕಾಳು, ಬೇಳೆಗಳು, ಹಾಲು, ಮೊಸರು ಮತ್ತು ಹಣ್ಣು ಹಂಪಲುಗಳೂ ಸಹ ಸಾಕಷ್ಟು ಪ್ರೋಟೀನಯುಕ್ತ ಪದಾರ್ಥಗಳು.

ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಒಂದು ಪ್ರೊಟೀನ್ ಪೇಯದ ಜಾಹಿರಾತಿನಲ್ಲಿ ಹೇಳುವುದನ್ನು ನೀವು ಕೇಳಿರಬಹುದು. ನಿಮ್ಮ ದೇಹತೂಕ 80 ಕೆಜಿಯಾಗಿದ್ದರೆ, ಪ್ರತಿದಿನ 80 ಗ್ರಾಂಗಳಷ್ಟು ಪ್ರೊಟೀನ್ ದೇಹಕ್ಕೆ ಬೇಕಾಗುತ್ತದಂತೆ. ಎಷ್ಟು ಗ್ರಾಂ ಬೇಕು ಅಂತ ನಾವು ಅಕ್ಷಯ್ನ ಹಾಗೆ ಹೇಳಲಾರೆವು ಆದರೆ, ದಿನಂಪ್ರತಿ ನಮ್ಮ ಬಾಡಿಗೆ, ಅದರ ಉತ್ತಮ ಸ್ವಾಸ್ಥ್ಯಕ್ಕೆ ಪ್ರೊಟೀನ್ ಬೇಕೇಬೇಕು ಅಂತ ಖಚಿತವಾಗಿ ಹೇಳುತ್ತೇವೆ. ಪ್ರೋಟೀನ್ ಆರೋಗ್ಯಕರ ಆಹಾರದ ಪ್ರಮುಖ ಭಾಗವಾಗಿದೆ. ಪ್ರೋಟೀನ್​ಗಳು ಅಮೈನೋ ಆಮ್ಲಗಳು ಎಂಬ ರಾಸಾಯನಿಕ ‘ಬಿಲ್ಡಿಂಗ್ ಬ್ಲಾಕ್ಸ್’ ನಿಂದ ರೂಪುಗೊಂಡಿವೆ. ದೇಹದಲ್ಲಿರುವ ಸ್ನಾಯು ಮತ್ತು ಮೂಳೆಗಳ ದುರಸ್ತಿಗೆ ಮತ್ತು ಅವುಗಳ ಬಲವರ್ಧನೆಗೆ ಅಮೈನೋ ಆಮ್ಲಗಳು ನೆರವಾಗುತ್ತವೆ. ಹಾಗೆಯೇ, ಅಮೈನೋ ಆಮ್ಲಗಳು ಹಾರ್ಮೋನು ಮತ್ತು ಕಿಣ್ವಗಳನ್ನು ತಯಾರಿಸಲು ಸಹಾಯ ಮಾಡುತ್ತವೆ. ಶಕ್ತಿಯ ಮೂಲವಾಗಿಯೂ ದೇಹವು ಪ್ರೋಟೀನ್​ಗಳನ್ನು ಬಳಸುತ್ತದೆ.

ನಮ್ಮಲ್ಲೊಂದು ಅಪನಂಬಿಕೆ ಇದೆ, ಮಾಂಸಾಹಾರ ಸೇವಿಸಿದರೆ ಮಾತ್ರ ದೇಹಕ್ಕೆ ಪ್ರೋಟೀನು ಸಿಗುತ್ತದೆ ಅನ್ನೋದು. ಹಾಗೇನೂ ಇಲ್ಲ ಮಾರಾಯ್ರೇ. ಸಸ್ಯಾಹಾರದ ಭಾಗವಾಗಿರುವ ಕಾಳು, ಬೇಳೆಗಳು, ಹಾಲು, ಮೊಸರು ಮತ್ತು ಹಣ್ಣು ಹಂಪಲುಗಳೂ ಸಹ ಸಾಕಷ್ಟು ಪ್ರೋಟೀನಯುಕ್ತ ಪದಾರ್ಥಗಳು.

ಸೋಯಾ ಗೊತ್ತಲ್ಲ? ಇದು ಮಾಂಸಕ್ಕೆ ಪರ್ಯಾಯ ಅಂತ ಹೇಳುತ್ತಾರೆ. ಅಂದರೆ ಅದರಲ್ಲಿ ಅಷ್ಟೊಂದು ಪ್ರಮಾಣದ ಪ್ರೊಟೀನ್ ಇರುತ್ತದೆ.

ಹೆಸರುಕಾಳು ಅಂತೂ ಪ್ರೊಟೀನಿನ ಪವರ್ ಹೌಸ್ ಅಂತೆ. ಶೇಂಗಾ, ಕಡಲೆ ಕಾಳು, ಅವರೆ ಕಾಳು, ಬಟಾಣಿ ಮತ್ತು ಎಲ್ಲ ಬಗೆಯ ಬೇಳೆಗಳು-ತೊಗರಿ, ಕಡಲೆ, ಉದ್ದು ಮೊದಲಾದವುಗಳಲ್ಲಿ ಹೇರಳವಾಗಿ ಪ್ರೋಟೀನ್ ಇವೆ.

ಪನ್ನೀರ್ ನಮ್ಮೆಲ್ಲರಿಗೆ ಇಷ್ಟವಾಗುವ ಆಹಾರ ಪದಾರ್ಥ. 100 ಗ್ರಾಂ ಪನ್ನೀರ್​ನಲ್ಲಿ 20 ಗ್ರಾಂ ಪ್ರೋಟೀನ್ ಇರುತ್ತದೆ. 25 ಗ್ರಾಂನಷ್ಟು ಹಸಿ ಕಳ್ಳೆಬೀಜ ತಿಂದರೆ 100 ಗ್ರಾಂನಷ್ಟು ಪ್ರೋಟೀನ್ ಉತ್ಪತ್ತಿ ಆಗುತ್ತದೆ. ಬಾದಾಮಿಯೂ ಪ್ರೋಟೀನಿನ ಭಂಡಾರವಾಗಿದೆ. ಒಂದು ಬಾದಾಮಿ ಬೀಜದಲ್ಲಿ 2 ಗ್ರಾಂ ಪ್ರೊಟೀನ್ ಇರುತ್ತದೆ.

ಇದನ್ನೂ ಓದಿ:  ಪುಷ್ಪ ಸಿನಿಮಾದಿಂದ ಸ್ಫೂರ್ತಿ ಪಡೆದು ಅಪ್ರಾಪ್ತರಿಂದ ಕೊಲೆ; ಫೇಮಸ್​ ಆಗಲೆಂದು ಹತ್ಯೆಯ ವಿಡಿಯೋ ಅಪ್​ಲೋಡ್ ಮಾಡಲು ಪ್ಲಾನ್!