ನಟಿ ಅಮೂಲ್ಯ ಸೀಮಂತ ಶಾಸ್ತ್ರದ ಎಕ್ಸ್ಕ್ಲೂಸಿವ್ ವಿಡಿಯೋ ಇಲ್ಲಿದೆ
ಈಗ ಅಮೂಲ್ಯ 7 ತಿಂಗಳ ಗರ್ಭಿಣಿ. ಅವರು ತಾಯಿ ಆಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸದ್ಯ ಅವರ ಸೀಮಂತದ ಫೋಟೋ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕನ್ನಡದ ಖ್ಯಾತ ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತಾವು ಪ್ರೆಗ್ನೆಂಟ್ ಎಂಬ ವಿಚಾರವನ್ನು ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಗುರುವಾರ (ಜನವರಿ 21) ಅವರ ಸೀಮಂತ ಶಾಸ್ತ್ರ ನೆರವೇರಿದೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಅಮೂಲ್ಯ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಸಂಸಾರದ ಕಡೆಗೆ ಅವರು ಹೆಚ್ಚು ಗಮನ ನೀಡಿದ್ದಾರೆ. ಈಗ ಅಮೂಲ್ಯ 7 ತಿಂಗಳ ಗರ್ಭಿಣಿ. ಅವರು ತಾಯಿ ಆಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸದ್ಯ ಅವರ ಸೀಮಂತದ ಫೋಟೋ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಲವು ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು. ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್ ಜತೆ ಅಮೂಲ್ಯ ಮದುವೆ 2017ರಲ್ಲಿ ನೆರವೇರಿತು. ಈಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರ ಸೀಮಂತದ ಎಕ್ಸ್ಕ್ಲೂಸಿವ್ ವಿಡಿಯೋ ಇಲ್ಲಿದೆ.
ಇದನ್ನೂ ಓದಿ: ನಟಿ ಅಮೂಲ್ಯಗೆ ಸೀಮಂತ ಶಾಸ್ತ್ರ
Amulya: ಅದ್ದೂರಿಯಾಗಿ ನಡೆದ ಅಮೂಲ್ಯ ಸೀಮಂತ ಶಾಸ್ತ್ರ; ಇಲ್ಲಿವೆ ಫೋಟೋಗಳು