Gandhada Gudi: ‘ಗಂಧದ ಗುಡಿ’ ನೋಡಿ ಅಜ್ಜಿ ಭಾವುಕ; ಪುನೀತ್ ನೆನೆದು ಕಣ್ಣೀರಿಟ್ಟ ಹಿರಿಯ ಜೀವ

| Updated By: ಮದನ್​ ಕುಮಾರ್​

Updated on: Oct 29, 2022 | 7:45 AM

Gandhada Gudi | Puneeth Rajkumar: ಎಲ್ಲೆಡೆ ‘ಗಂಧದ ಗುಡಿ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿರುವುದರಿಂದ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್​ ಆಗುತ್ತಿದ್ದಾರೆ.

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರವನ್ನು ನೋಡುತ್ತಿದ್ದಾರೆ. ಎಲ್ಲರಿಗೂ ಇದು ಇಷ್ಟ ಆಗುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿರುವುದರಿಂದ ಅಭಿಮಾನಿಗಳು (Puneeth Rajkumar Fans) ಭಾವನಾತ್ಮಕವಾಗಿ ಕನೆಕ್ಟ್​ ಆಗುತ್ತಿದ್ದಾರೆ. ‘ಗಂಧದ ಗುಡಿ’ ನೋಡಿದ ಬಳಿಕ ಅಜ್ಜಿಯೊಬ್ಬರು ಕಣ್ಣೀರು ಹಾಕಿದ್ದಾರೆ. ಕರುನಾಡಿನ ಮನೆಮಗನಂತೆ ಇದ್ದ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ನೆನೆದು ಈ ಹಿರಿಯ ಜೀವ ಗಳಗಳನೆ ಅತ್ತಿದೆ.