‘ಒಮ್ಮೆ ಬಂದು ನೊಡ್ಕೊಂಡು ಹೋಗೋ ಕಂದಾ’; ಸೋದರತ್ತೆ ನಾಗಮ್ಮಗೆ ಇನ್ನೂ ತಿಳಿದಿಲ್ಲ ಅಪ್ಪು ಸಾವಿನ ವಿಚಾರ
ಪುನೀತ್ ನಮ್ಮನ್ನು ಅಗಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು, ಆದರೆ ಅವರದ್ದೇ ಕುಟುಂಬದ ನಾಗಮ್ಮನ ಹೊರತುಪಡಿಸಿ. ಹೌದು, ಅಪ್ಪು ಅವರ ಸೋದರತ್ತೆ ನಾಗಮ್ಮ ಅವರಿಂದ ಈ ವಿಚಾರವನ್ನು ಮುಚ್ಚಿಡಲಾಗಿದೆ. ಹೀಗಾಗಿ, ಅಪ್ಪು ಜನ್ಮದಿನಕ್ಕೆ ಅವರು ಭಾವುಕವಾಗಿ ವಿಶ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಪುನೀತ್ ರಾಜ್ಕುಮಾರ್ ಇಲ್ಲ ಎಂಬ ಸುದ್ದಿ ಇಡೀ ಜಗತ್ತಿಗೆ ಗೊತ್ತಿದೆ. ಆದರೆ, ಪುನೀತ್ ಅವರ ಸೋದರತ್ತೆ ನಾಗಮ್ಮನಿಗೆ ಮಾತ್ರ ಈ ವಿಚಾರ ತಿಳಿದೇ ಇಲ್ಲ. ಪುನೀತ್ ಜನ್ಮದಿನದ ಪ್ರಯುಕ್ತ ಅಪ್ಪುಗೆ ಶುಭ ಹಾರೈಸಿರೋ ನಾಗಮ್ಮ (Nagamma), ಒಮ್ಮೆ ಬಂದು ನೊಡ್ಕೊಂಡು ಹೋಗು ಎಂದು ಕೋರಿದ್ದಾರೆ. ‘ಚೆನ್ನಾಗಿದಿಯಾ ಮಗನೇ? ನಿನಗೆ 50 ವರ್ಷ ಆಗಿದೆ. ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ. ನಿನಗೆ 50 ವರ್ಷ ಆಯ್ತಲ್ಲೋ’ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ಹೇಳಿದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಅಪ್ಪು ನಿಧನರಾಗಿರುವ ವಿಚಾರ ತಿಳಿದರೆ ಶಾಕ್ ಆಗುತ್ತದೆ ಎಂಬ ಕಾರಣಕ್ಕೆ ಅವರಿಂದ ಈ ವಿಚಾರವನ್ನು ಮುಚ್ಚಿಡಲಾಗಿದೆ. ಅಪ್ಪು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ ಎಂದು ನಾಗಮ್ಮ ನಂಬಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 18, 2025 10:21 AM