ಪುನೀತ್ ರಾಜಕುಮಾರ ಕೊನೆಯ ಚಿತ್ರ ‘ಜೇಮ್ಸ್‘ ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅಭಿಮಾನಿಗಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2022 | 5:26 PM

ಅಪ್ಪು ನೀಡಿದ ಸಲಹೆಯನ್ನು ಅವರ ಅಭಿಮಾನಿಗಳು ಮರೆಯುವುದು ಸಾಧ್ಯವೇ? ಮಂಗಳವಾರದಂದು ಅವರು ಅಭಿಷೇಕಕ್ಕಾಗಿ ಖರೀದಿಸಿದ ಹಾಲು ಮತ್ತು ಹಣ್ಣುಗಳನ್ನು ಬಿ ಬಿ ಎಪ್ ಪಿಯ ಪೌರಕಾರ್ಮಿಕರ ನಡುವೆ ಹಂಚಿದ್ದಾರೆ. ಹೌದು, ಪೌರ ಕಾರ್ಮಿಕರು ಅದಕ್ಕೆ ಅರ್ಹರು.

ಪವರ್ ಸ್ಟಾರ್ (Power Star) ಪುನೀತ್ ರಾಜಕುಮಾರ (Puneeth Rajkumar) ಅಭಿನಯದ ಬಹು ನಿರೀಕ್ಷಿತ ‘ಜೇಮ್ಸ್’ (‘James’) ಚಿತ್ರ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಅಪ್ಪು ಅಕಾಲಿಕ ಮರಣವನ್ನಪ್ಪಿ ನಾಲ್ಕೂವರೆ ತಿಂಗಳ ನಂತರ ತೆರೆಕಾಣುತ್ತಿರುವ ಸಿನಿಮಾ ಇದು. ಅವರ ಅಭಿಮಾನಿಗಳು ಬಹಳ ಕಾತುರತೆಯಿಂದ ಸಿನಿಮಾಗಾಗಿ ಕಾಯುತ್ತಿದ್ದರು. ಚಿತ್ರದ ರಿಲೀಸ್ ದಿನಕ್ಕಾಗಿ ಅಭಿಮಾನಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಭಾರಿ ಗಾತ್ರದ ಕಟೌಟ್ ಗಳು ತಯಾರಾಗುತ್ತಿವೆ. ಅಭಿಮಾನಿಗಳ ಗುಂಪು ಬಹಳ ಮುತುವರ್ಜಿಯಿಂದ ಅವುಗಳನ್ನು ತಯಾರು ಮಾಡುತ್ತಿದೆ. ಅಪ್ಪು ಅವರ ಅಭಿಮಾನಿ ಬಳಗ ಬಹಳ ದೊಡ್ಡದು. ಇದು ನಮಗೆ ಗೊತ್ತಿರುವ ವಿಚಾರವೇ. ಅವರು ನಿಧನ ಹೊಂದಿದ ನಂತರ ಅಭಿಮಾನಿಗಳಲ್ಲಿ ಉತ್ಸಾಹವೇ ಬತ್ತಿ ಹೋಗಿತ್ತು. ಆದರೆ ಜೇಮ್ಸ್ ಚಿತ್ರದ ಬಿಡುಗಡೆ ಅವರನ್ನು ಪುನಃ ಚೇತೋಹಾರಿಯನ್ನಾಗಿಸಿದೆ.

ಅಸಲಿಗೆ ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾದಾಗ ಅಭಿಮಾನಿಗಳು ಕಟೌಟ್ ಗೆ ಹಾಲಿನ ಅಭಿಷೇಕ ಮಾಡುವುದು ವಾಡಿಕೆ. ಪುನೀತ್ ರಾಜಕುಮಾರ ಅವರ ಕಟೌಟ್ ಗಳಿಗೂ ಅಭಿಮಾನಿಗಳು ಕ್ಷೀರಾಭಿಷೇಕ ಮಾಡುತ್ತಿದ್ದರು. ಆದರೆ ಪುನೀತ್ ಹಾಲನ್ನು ಹಾಗೆ ವ್ಯರ್ಥಮಾಡುವ ಬದಲು ಬಡವರಿಗೆ ಹಂಚಿ ಎಂದು ಹೇಳಿದ್ದರಂತೆ. ಅವರ ಅಭಿಮಾನಿಯೊಬ್ಬ ಇದನ್ನು ಟಿವಿ9 ಸಿನಿಮಾ ವರದಿಗಾರ ಮಾಲತೇಶ್ ಜಗ್ಗಿನ್ ಅವರಿಗೆ ಹೇಳುತ್ತಿದ್ದಾರೆ.

ಅಪ್ಪು ನೀಡಿದ ಸಲಹೆಯನ್ನು ಅವರ ಅಭಿಮಾನಿಗಳು ಮರೆಯುವುದು ಸಾಧ್ಯವೇ? ಮಂಗಳವಾರದಂದು ಅವರು ಅಭಿಷೇಕಕ್ಕಾಗಿ ಖರೀದಿಸಿದ ಹಾಲು ಮತ್ತು ಹಣ್ಣುಗಳನ್ನು ಬಿ ಬಿ ಎಪ್ ಪಿಯ ಪೌರಕಾರ್ಮಿಕರ ನಡುವೆ ಹಂಚಿದ್ದಾರೆ. ಹೌದು, ಪೌರ ಕಾರ್ಮಿಕರು ಅದಕ್ಕೆ ಅರ್ಹರು.

ಅವರು ಆರ್ಥಿಕವಾಗಿ ದುರ್ಬಲರು ಅನ್ನುವ ಕಾರಣಕ್ಕೆ ನಾವು ಈ ಮಾತನ್ನು ಹೇಳುತ್ತಿಲ್ಲ. ಅವರು ಸಮಾಜಕ್ಕೆ ಒದಗಿಸುವ ಸೇವೆ ಸಾಮಾನ್ಯವಾದುದಲ್ಲ. ನಾವು ಬೆಳಗ್ಗೆ ಎದ್ದು ಆಫೀಸಿಗೆ ಹೊರಡುವಾಗ ಕನ್ನಡಿಯ ಹಾಗೆ ಹೊಳೆಯುವ ರಸ್ತೆಗಳು ನಮ್ಮನ್ನು ಸ್ವಾಗತಿಸಿದರೆ, ಅದರ ಶ್ರೇಯಸ್ಸು ಸಲ್ಲಬೇಕಿರುವುದು ಪೌರ ಕಾರ್ಮಿಕರಿಗೆ. ಹಾಗಾಗೇ ಈ ಗೌರವಕ್ಕೆ ಅವರು ಎಲ್ಲರಿಗಿಂತ ಹೆಚ್ಚು ಅರ್ಹರು!

ಇದನ್ನೂ ಓದಿ:  ‘ಪುನೀತ್​ ಪಾತ್ರಕ್ಕೆ ಡಬ್​ ಮಾಡುವಾಗ ಭಯವಾಯ್ತು’; ‘ಜೇಮ್ಸ್​’ ಕಾರ್ಯಕ್ರಮದಲ್ಲಿ ಶಿವಣ್ಣ ಭಾವುಕ ನುಡಿ

Published on: Mar 08, 2022 05:25 PM