ಮಕ್ಕಳ ದಿನಾಚರಣೆಗೆ ಪುನೀತ್ ವಿಶ್; ವೈರಲ್ ಆದ ಹಳೇ ವಿಡಿಯೋ ಕಂಡು ಫ್ಯಾನ್ಸ್ ಭಾವುಕ
Children's Day 2021: ಪುನೀತ್ ರಾಜ್ಕುಮಾರ್ ಅವರ ಹಳೆಯ ವಿಡಿಯೋಗಳು ಇಂದಿನ ಸಂದರ್ಭಕ್ಕೆ ಅನುಗುಣವಾಗಿ ವೈರಲ್ ಆಗುತ್ತಿವೆ. ಮಕ್ಕಳ ದಿನಾಚರಣೆಗೆ ಅವರು ವಿಶ್ ಮಾಡಿದ್ದ ವಿಡಿಯೋ ಕೂಡ ಇಂದು (ನ.14) ಸಖತ್ ವೈರಲ್ ಆಗುತ್ತಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಹೃದಯಾಘಾತದಿಂದ ಮೃತಪಟ್ಟಿದ್ದನ್ನು ಸಹಿಸಿಕೊಳ್ಳುವುದು ಕಷ್ಟ. ಜನರು ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಪುನೀತ್ ಅವರು ನಮ್ಮ ಕಣ್ಣಮುಂದೆ ಬರುತ್ತಾರೆ. ಅವರ ಹಳೆಯ ವಿಡಿಯೋಗಳು ಇಂದಿನ ಸಂದರ್ಭಕ್ಕೆ ಅನುಗುಣವಾಗಿ ವೈರಲ್ ಆಗುತ್ತಿವೆ. ಕಳೆದ ವರ್ಷ ಅವರು ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ್ದ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿ, ಅವರು ಮಕ್ಕಳ ದಿನಾಚರಣೆಗೆ (Children’s Day) ವಿಶ್ ಮಾಡಿದ್ದ ವಿಡಿಯೋ ಕೂಡ ಇಂದು (ನ.14) ಸಖತ್ ವೈರಲ್ ಆಗುತ್ತಿದೆ. ಅದನ್ನು ನೋಡಿದಾಗ ಮತ್ತೆ ಅಪ್ಪು ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ.
ಅಪ್ಪು ಎಂದರೆ ಎಲ್ಲ ವಯಸ್ಸಿನವರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಪುನೀತ್ ಹಾಡು ಮತ್ತು ಸಿನಿಮಾಗಳು ರುಚಿಸುತ್ತಿದ್ದವು. ಪುನೀತ್ ನಿಧನರಾದರು ಎಂಬ ಸುದ್ದಿ ಗೊತ್ತಾಗಾದ ಅನೇಕ ಮಕ್ಕಳು ಕಣ್ಣೀರು ಹಾಕಿದ ಬಗ್ಗೆ ವರದಿ ಆಗಿತ್ತು. ಅಪ್ಪು ಮೇಲೆ ಅವರು ಇಟ್ಟಿದ್ದ ಅಭಿಮಾನ, ಪ್ರೀತಿಗೆ ಆ ಕಣ್ಣೀರು ಸಾಕ್ಷಿ. ಅದೇ ರೀತಿ ವೃದ್ಧರಿಗೂ ಪುನೀತ್ ಎಂದರೆ ಅಚ್ಚುಮೆಚ್ಚು. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕುಕನೂರು ಬಸ್ ನಿಲ್ದಾಣದಲ್ಲಿ ವೃದ್ಧೆಯೊಬ್ಬರು ಪುನೀತ್ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ವಿಡಿಯೋ ಸಹ ವೈರಲ್ ಆಗಿತ್ತು.
ಇದನ್ನು ಓದಿ:
Rachita Ram: ವೇದಿಕೆ ಮೇಲೆ ಪುನೀತ್ಗೆ ಅವಮಾನ: ಕ್ಷಮೆ ಕೇಳಿದ ರಚಿತಾ ರಾಮ್ ಈಗ ನೀಡಿದ ಸಮಜಾಯಿಷಿ ಏನು?
ಅಪ್ಪು ಫೋಟೋ ಮುಂದೆ ಶಾಂಪೇನ್ ವಿವಾದ: ‘ಇದು ಇಷ್ಟು ದೊಡ್ಡದು ಆಗುತ್ತೆ ಅಂತ ಗೊತ್ತಿರಲಿಲ್ಲ’: ಪ್ರೇಮ್ ಪ್ರತಿಕ್ರಿಯೆ