Loading video

ಪುನೀತ್ ರಾಜ್​ಕುಮಾರ್ ಅವರ ಸ್ಟಂಟ್ ಅನ್ನು ‘ಅಪ್ಪು ವೆಂಕಟೇಶ್’ ನೆನಪಿಸಿಕೊಂಡಿದ್ದು ಹೀಗೆ

|

Updated on: Mar 11, 2025 | 1:10 PM

Puneeth Rajkumar: ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ‘ಅಪ್ಪು’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ‘ಅಪ್ಪು’ ಸಿನಿಮಾ ಶೂಟಿಂಗ್ ಸಮಯದಲ್ಲಿ ಪುನೀತ್ ರಾಜ್​ಕುಮಾರ್ ಅವರಿಗೆ ಆಕ್ಷನ್ ತರಬೇತಿ ನೀಡಿದ್ದ ಅಪ್ಪು ವೆಂಕಟೇಶ್, ಪುನೀತ್ ರಾಜ್​ಕುಮಾರ್ ಅವರ ಡೆಡಿಕೇಶನ್ ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ. ಕೆಲ ಘಟನೆಗಳನ್ನು ಉದಾಹರಣೆಯಾಗಿ ನೀಡಿದ್ದಾರೆ.

ಪುನೀತ್ ರಾಜ್​ಕುಮಾರ್ ಅವರು ಒಳ್ಳೆಯ ನಟ, ಅದ್ಭುತ ಡ್ಯಾನ್ಸರ್ ಆಗಿರುವ ಜೊತೆಗೆ ಅತ್ಯದ್ಭುತವಾದ ಫೈಟರ್ ಸಹ ಆಗಿದ್ದರು. ತಮ್ಮ ಸಿನಿಮಾಗಳಲ್ಲಿ ಡ್ಯೂಪ್​ಗಳು ಇಲ್ಲದೆ ಫೈಟ್ ದೃಶ್ಯಗಳನ್ನು ಭಾಗಿ ಆಗುತ್ತಿದ್ದರು. ಅವರಷ್ಟು ರಿಸ್ಟ್ ತೆಗೆದುಕೊಂಡು ಆಕ್ಷನ್ ದೃಶ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ ಮತ್ತೊಬ್ಬ ಸ್ಟಾರ್ ನಟ ಕನ್ನಡ ಚಿತ್ರರಂಗದಲ್ಲಿ ಇರಲಿಲ್ಲ. ಆದರೆ ಅದಕ್ಕಾಗಿ ಅವರು ಸಾಕಷ್ಟು ತರಬೇತಿ ಪಡೆದಿರುತ್ತಿದ್ದರು. ಪುನೀತ್ ರಾಜ್​ಕುಮಾರ್ ಅವರು ನಾಯಕನಾಗಿ ಎಂಟ್ರಿ ಕೊಡುವ ಮುಂಚೆ ಅಪ್ಪು ವೆಂಕಟೇಶ್ ಅವರು ಅವರಿಗೆ ತರಬೇತಿ ನೀಡುತ್ತಿದ್ದರು. ಇದೀಗ ‘ಅಪ್ಪು’ ಸಿನಿಮಾ ಮರು ಬಿಡುಗಡೆ ಸಂದರ್ಭದಲ್ಲಿ ವೆಂಕಟೇಶ್ ಅವರು ಅಪ್ಪು ಅವರ ಡೆಡಿಕೇಶನ್ ಹೇಗೆ ಇರುತ್ತಿತ್ತು ಎಂಬುದನ್ನು ಉದಾಹರಣೆಯಾಗಿ ಕೆಲವು ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ