ಪಂಜಾಬ್ ಭೀಕರ ಪ್ರವಾಹ: ಜನರ ರಕ್ಷಿಸಿದ ಕೆಲವೇ ಕ್ಷಣಗಳಲ್ಲಿ ಕೊಚ್ಚಿ ಹೋದ ಕಟ್ಟಡ, ಭೀಕರ ವಿಡಿಯೋ ಇಲ್ಲಿದೆ

Updated on: Aug 27, 2025 | 1:46 PM

ಮೇಘಸ್ಫೋಟ, ಭೂ ಕುಸಿತ, ಪ್ರವಾಹದಿಂದ ಪ್ರವಾಸಿಗರ ಸ್ವರ್ಗ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ವಿವಿಧ ಪ್ರದೇಶಗಳು ನರಕವಾಗಿ ಬದಲಾಗಿವೆ. ಪಂಜಾಬ್‌ನ ಮಾಧೋಪುರ ಪ್ರಧಾನ ಕಚೇರಿ ಪ್ರವಾಹದಿಂದ ಕೊಚ್ಚಿಹೋಗಿದೆ. ಸಿಆರ್‌ಪಿಎಫ್ ಸಿಬ್ಬಂದಿ ನಾಗರಿಕರ ರಕ್ಷಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಕಟ್ಟ ಕೊಚ್ಚಿಹೋದ ವಿಡಿಯೋ ಇಲ್ಲಿದೆ.

ನವದೆಹಲಿ, ಆಗಸ್ಟ್ 27: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳು ಮಳೆ ಮತ್ತು ಮೇಘಸ್ಫೋಟಕ್ಕೆ ತತ್ತರಿಸಿವೆ. ಪ್ರವಾಹ, ಭೂ ಕುಸಿತ, ಮನೆಗಳು ಕೊಚ್ಚಿ ಹೋಗಿ ಜನರು ಯಮಯಾತನೆ ಅನುಭವಿಸ್ತಿದ್ದಾರೆ. ಪಂಜಾಬ್‌ನ ಮಾಧೋಪುರ ಪ್ರಧಾನ ಕಚೇರಿ ಕಟ್ಟಡದಲ್ಲಿ ಸಿಲುಕಿದ್ದ 22 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ಸೇನಾ ಹೆಲಿಕಾಪ್ಟರ್​​ನಲ್ಲಿ ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡಲಾಯಿತು. ಇದಾದ ಕೆಲವೇ ಕ್ಷಣಗಳಲ್ಲಿ ಕಟ್ಟಡ ಕುಸಿದು ಬಿದ್ದು ಪ್ರವಾಹದ ನೀರುಪಾಲಾದ ಭೀಕರ ದೃಶ್ಯ ಇಲ್ಲಿದೆ.